ಪ್ಯಾರಿಸ್: ಪ್ಯಾರಿಸ್ ನ 'ಚಾರ್ಲಿ ಹೆಬ್ಡೋ' ವಿಡಂಬನಾ ಪತ್ರಿಕಾ ಕಚೇರಿ ಮೇಲಿನ ಉಗ್ರ ದಾಳಿ ಮಾಸುವ ಮುನ್ನವೇ ಅಲ್ಲಿನ ಅಂಚೆ ಕಚೇರಿ ಮೇಲೆ ಉಗ್ರರು ದಾಳಿ ಮಾಡಿದ್ದಾರೆ ಎಂದು ಶುಕ್ರವಾರ ವರದಿ ಮಾಡಲಾಗಿದೆ.
ಶಸ್ತ್ರ ಸಜ್ಜಿತ ವ್ಯಕ್ತಿಯೋರ್ವ ಅಂಚೆ ಕಚೇರಿಯ ಒಳ ನುಗ್ಗಿದ್ದು, ಕನಿಷ್ಠ ಮೂವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಇನ್ನು ಖಚಿತ ಮಾಹಿತಿ ಲಭ್ಯವಾಗಿಲ್ಲ.
ಈ ಮಧ್ಯೆ, ಅಂಚೆ ಕಚೇರಿಯಲ್ಲಿ ಮೂವರನ್ನು ಒತ್ತೆಯಾಳಾಗಿರಿಸಿಕೊಂಡಿರುವ ವ್ಯಕ್ತಿ ಉಗ್ರನೇ ಅಲ್ಲ, ಆತ ಒಬ್ಬ ಮಾನಸಿಕ ಅಸ್ತವ್ಯಸ್ತ ಎಂದು ಪೊಲೀಸರು ತಿಳಿಸಿದ್ದಾರೆ.
ವಾರದ ಹಿಂದಷ್ಟೆ ನಡೆದಿದ್ದ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲಿನ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದರು.