ರಾಯಪುರ: ಮಾವೋವಾದಿಗಳು ಇಬ್ಬರು ಗ್ರಾಮಸ್ಥರನ್ನು ಅಪಹರಿಸಿ 'ಜನ ಅದಾಲತ್' (ಜನರ ನ್ಯಾಯಾಲಯ) ಅವರನ್ನು ಕೊಂದಿರುವ ಘಟನೆ ಚತ್ತೀಸ್ ಘರ್ ನ ನಕ್ಸಲ್ ಪೀಡಿತ ನಾರಾಯಣಪುರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮಲಾಲ್ ಮತ್ತು ಮಂತರ್ ಕ್ರಮವಾಗಿ ಆತ್ಪಾಲ್ ಮತ್ತು ಬೈಳಪಾದ್ ಗ್ರಾಮಗಳ ನಿವಾಸಿಗಳು ಬಂಡುಕೋರರಿಂದ ಹತ್ಯೆಗೊಳಗಾಗಿದ್ದಾರೆ. ಬೆನೂರ್ ಪೋಲೀಸ್ ಠಾಣೆ ವ್ಯಾಪ್ತಿಗೆ ಬರುವ ಈ ಗ್ರಾಮಸ್ಥರನ್ನು ಪೊಲೀಸ್ ಮಾಹಿತಿದಾರರು ಎಂದು ದೂರಿ ಕೊಲ್ಲಲಾಗಿದೆ ಎಂದು ನಾರಾಯಣಪುರ ಎಸ್ ಪಿ ತುಕಾರಾಂ ಕಾಂಬ್ಲೆ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಗಳ ಪ್ರಕಾರ ಜನವರಿ ೧೪ ರಂದು ನಕ್ಸಲರು ಇವರಿಬ್ಬರನ್ನೂ ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ. ಇವರನ್ನು 'ಜನ ಅದಾಲತ್' ನ್ಯಾಯಾಲಯದಲ್ಲಿ ಶನಿವಾರ ತಪ್ಪಿತಸ್ಥರೆಂದು ಪರಿಗಣಿಸಿ ಅವರನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿಗಳನ್ನು ಬಂದಿಸಲು ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ಎಸ್ ಪಿ ತಿಳಿಸಿದ್ದಾರೆ.