ನವದೆಹಲಿ: ೨೧೦೬ಕ್ಕೆ ವಿಶ್ವದ ಶೀಘ್ರವಾಗಿ ಬೆಳೆಯುತ್ತಿರುವ ಆರ್ಥಿಕ ದೇಶಗಳಲ್ಲಿ ಭಾರತ ಚೈನಾವನ್ನು ಹಿಂದಿಕ್ಕಲಿದೆ ಎಂದು ಇಂಟರ್ನ್ಯಾಷನಲ್ ಮಾನಿಟರ್ ಫಂಡ್ (ಐ ಎಂ ಎಫ್) ಮಂಗಳಾವಾರ ತಿಳಿಸಿದೆ.
ಈ ವರ್ಷ ಭಾರತದ ಆರ್ಥಿಕತೆ ೬.೩% ಬೆಳೆಯಲಿದ್ದು, ೨೦೧೬ ರಲ್ಲಿ ಶೇಕಡಾ ೬.೫ ವೃದ್ಧಿಯಾಗಲಿದೆ. ಇದು ಚೈನಾದ ನಿರೀಕ್ಷಿತ ಆರ್ಥಿಕ ಅಭಿವೃದ್ಧಿಯನ್ನು ಹಿಂದಿಕ್ಕಲಿದೆ ಎಂದು ವಿಶ್ವ ಆರ್ಥಿಕ ದೃಷ್ಟಿಕೋನದ ಅಪ್ಡೇಟ್ ನಲ್ಲಿ ತಿಳಿಸಿದೆ.
ಉತ್ಪಾದನಾ ಸಂಸ್ಥೆಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಸನ್ನದ್ಧವಾಗಿದ್ದು ಹಾಗೂ 'ಮೇಕ್ ಇನ್ ಇಂಡಿಯಾ' ಪ್ರಚಾರ ಕೂಡ ಚಾಲ್ತಿಯಲ್ಲಿದು ಇವುಗಳು ಭಾರತದ ಶೀಘ್ರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿವೆ.
ಹಾಗೆಯೇ ಈ ಅಭಿವೃದ್ಧಿಗೆ ಸಹಕಾರಿಯಾಗಲಿರುವ ಇತರ ಸಂಗತಿಗಳೆಂದರೆ ಜಾಗತಿಕ ರಂಗದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದ ಕಡಿತ, ಯೂರೋ ಮತ್ತು ಯೆನ್ ಕರೆನ್ಸಿಗಳ ಅಪಮೌಲ್ಯ ಕೂಡ ಪೂರಕವಾಗಲಿವೆ ಎನ್ನಲಾಗಿದೆ.
ಅಲ್ಲದೆ ಚೈನಾದಲ್ಲಿ ೨೦೧೪ರ ದ್ವಿತೀಯಾರ್ಧದಲ್ಲಿ ಹೂಡಿಕೆ ಅಭಿವೃದ್ಧಿ ಗಣನೀಯ ಇಳಿಮುಖ ಕಂಡಿದ್ದು ಇದು ಇನ್ನೂ ನಿಧಾನಿಸಲಿದೆ ಎಂದು ಐ ಎಂ ಎಫ್ ಅಭಿಪ್ರಾಯಪಟ್ಟಿದೆ.