ಬುರ್ಧ್ವಾನ್: ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಮತ್ತೆ ತೃಣಮೂಲ ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೋಟ್ ಬ್ಯಾಂಕಿಗೋಸ್ಕರ ರಾಷ್ರದ ಭದ್ರತೆಯನ್ನೇ ಒತ್ತೆಯಿಟ್ಟಿದ್ದಾರೆ ಎಂದು ದೂರಿದ್ದಾರೆ.
ಸ್ಫೋಟದಿಂದ ಬಾಂಗ್ಲಾದೇಶದ ಇಬ್ಬರು ಉಗ್ರಗಾಮಿಗಳು ಮೃತಪಟ್ಟಿದ್ದ ಬುರ್ಧ್ವಾನ್ ನಲ್ಲಿ ಬಿಜೆಪಿ ಪಕ್ಷದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಷಾ, ಬಾಂಗ್ಲಾದೇಶಿ ನುಸುಳುಕೋರರಿಗೆ ತೃಣಮೂಲ ಕಾಂಗ್ರೆಸ್ ಆಶ್ರಯ ಕೊಟ್ಟಿದೆ ಎಂದಿದ್ದಾರೆ.
"ನರೇಂದ್ರ ಮೋದಿ ಸರ್ಕಾರ ದೇಶವನ್ನು ಮುಂಚೂಣಿಗೆ ಕೊಂಡೊಯ್ಯುತ್ತಿದ್ದರೆ ತೃಣಮೂಲ ಸರ್ಕಾರ ಪಶ್ಚಿಮ ಬಂಗಾಳವನ್ನು ಹಿಂದಕ್ಕೆ ಕೆರೆದೊಯುತ್ತಿದೆ. ಬಂಗಾಳದ ಅಭಿವೃದ್ಧಿಗೆ ಬಿಜೆಪಿ ಕೆಲಸ ಮಾಡಲು ಇಚ್ಛಿಸುತ್ತಿದೆ ಆದರೆ ಮಮತಾ ನಮಗೆ ಅವಕಾಶ ನೀಡುತ್ತಿಲ್ಲ" ಎಂದಿದ್ದಾರೆ.
ತೃಣಮೂಲ ಕಾಂಗ್ರೆಸ್ ನ ಮತ ಬ್ಯಾಂಕ್ ರಾಜಕೀಯಕ್ಕೆ ಬುರ್ಧ್ವಾನ್ ಸ್ಫೋಟ ಉದಾಹರಣೆ. ಸ್ಫೋಟಕ್ಕೂ ಮುಂಚೆ ತೃಣಮೂಲ ಸರ್ಕಾರ ಸರಿಯಾಗಿ ವಿಚಾರಣೆ ನಡೆಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದಿದ್ದಾರೆ.