ನವದೆಹಲಿ: ಬಲ್ಲ ಮೂಲಗಳ ಪ್ರಕಾರ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಿಜೆಪಿ ಸೇರಲಿದ್ದಾರೆ ಎಂಬ ವರದಿಯನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಬಿಜೆಪಿ ಸೇರಲು ತಮಗೆ ಪಕ್ಷ ಮನವಿ ಮಾಡಿತ್ತು ಆದರೆ ಅವರು ಅದನ್ನು ಗಂಗೂಲಿ ನಿರಾಕರಿಸಿದರು ಎಂದು ಕೂಡ ಮೂಲಗಳು ತಿಳಿಸಿವೆ.
ತಮಗೆ ಬಿಜೆಪಿ ಸೇರಲು ಅವಕಾಶ ಇದ್ದರೂ ನನಗೆ ಯಾವುದೇ ಚುನಾವಣೆ ಎದುರಿಸಲು ಇಷ್ಟವಿಲ್ಲದ ಕಾರಣ ನಾನು ನಿರಾಕರಿಸಿದೆ ಎಂದು ಗಂಗೂಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
೨೧೦೪ ರ ಲೋಕಸಭಾ ಚುನಾವಣೆಯ ಸಮಯದಲ್ಲೂ ಬಿಜೆಪಿ ಸೇರ್ಪಡೆಗೆ ಪಕ್ಷ ಅವರನ್ನು ಕೇಳಿಕೊಂಡಿತ್ತು. ಆಗ ಕೂಡ ಗಂಗೂಲಿ ನಿರಾಕರಿಸಿದ್ದರು. ಗಂಗೂಲಿ ಬಿಜೆಪಿ ಸೇರಿದ್ದರೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆ ಭಾರಿ ಹಿನ್ನಡಯಾಗುತ್ತಿತ್ತು ಎಂಬುದು ರಾಜಕೀಯ ಪಂಡಿತರ ಅಭಿಮತ.