ಪ್ರಧಾನ ಸುದ್ದಿ

'ಲೋಹದ ಮಹಿಳೆ' ಇರಾಂ ಶರ್ಮಿಳಾ ಬಿಡುಗಡೆಗೆ ಆದೇಶಿಸಿದ ಮಣಿಪುರ ನ್ಯಾಯಾಲಯ

Guruprasad Narayana

ಇಂಫಾಲ್: ೧೪ ವರ್ಷಗಳಿಂದ ಸಶಸ್ತ್ರ ಪಡೆಗಳ ವಿಷೇಶ ಅಧಿಕಾರದ ವಿವಾದಿತ ಕಾನೂನನ್ನು (ಎ ಎಫ್ ಎಸ್ ಪಿ  ಎ) ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಮಣಿಪುರದ 'ಲೋಹದ ಮಹಿಳೆ' ಇರಾಂ ಶರ್ಮಿಳಾ ಅವರನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಮಣಿಪುರ ನ್ಯಾಯಾಲಯ ಗುರುವಾರ ಸೂಚಿಸಿದೆ.

ಭಾರತೀಯ ಕಾನೂನು ನೀತಿಯ ಪ್ರಕಾರ ಶರ್ಮಿಳಾ ಮೇಲೆ ಹೊರಿಸಲಾಗಿದ್ದ ಸೆಕ್ಷನ್ ೩೦೯ ಮತ್ತು ೩೫೩ ಪ್ರಕರಣಗಳನ್ನು ನ್ಯಾಯಾಲಯ ತಳ್ಳಿ ಹಾಕಿರುವುದರಿಂದ  ಮುಂದಿನ ಕೆಲವು ದಿನಗಳಲ್ಲಿ ಶರ್ಮಿಳಾ ಬಿಡುಗಡೆಯಾಗಲಿದ್ದಾರೆ.

ಮಣಿಪುರದಲ್ಲಿ ಆರ್ಮಡ್ ಫೋರ್ಸಸ್ ಸ್ಪೆಶಲ್ ಪವರ್ಸ್ ಆಕ್ಟ್ ಅನ್ನು ತೆರವು ಮಾಡಬೇಕೆಂದು ಆಗ್ರಹಿಸಿ ೨೦೦೦ರಲ್ಲಿ ಶರ್ಮಿಳಾ ಅವರು ಅನಿರ್ಧಿಷ್ಟ ಅವಧಿಯ ಉಪವಾಸ ಪ್ರಾರಂಭಿಸಿದ್ದರು. ಅಂದಿನಿಂದಲೂ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಎ ಎಫ್ ಎಸ್ ಪಿ  ಎ ವಿಧಿಯನ್ನು ಶರ್ಮಿಳಾ ಮಾರಣಾಂತಿಕ ಎಂದಿದ್ದರು.

SCROLL FOR NEXT