ನವದೆಹಲಿ: ಲಿಯಾಕತ್ ಷಾ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಎಂದು ಆರೋಪಿಸಲಾಗಿದ್ದ ಪ್ರಕರಣದಲ್ಲಿ, ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ದೆಹಲಿ ಪೊಲೀಸರ ಮಾಹಿತಿದಾರ ಎನ್ನಲಾದ ಸಬೀರ್ ಖಾನ್ ಪಠಾನ್ ಎಂಬುವವನ ಮೇಲೆ ಶನಿವಾರ ಆರೋಪ ಹೊರೆಸಿ ಚಾರ್ಜ್ ಶೀಟ್ ಹಾಕಲಾಗಿದೆ.
ಅಲ್ಲದೆ ದೆಹಲಿ ಪೊಲೀಸರ ವಿಷೇಶ ದಳ, ಲಿಯಾಕತ್ ಷಾ ವಿರುದ್ದ ಮಾಡಲಾಗಿದ್ದ ಎಲ್ಲ ಭಯೋತ್ಪಾದಕ ಚಟುವಟಿಕೆಯ ಆರೋಪಗಳನ್ನು ವಜಾ ಮಾಡಿದೆ.
ನೇಪಾಳದಿಂದ ಭಾರತಕ್ಕೆ ನುಸುಳಿ ಬಂದಿದ್ದ ಲಿಯಾಕತ್ ಷಾ ಅವರನ್ನು ಉತ್ತರಪ್ರದೇಶದ ಗೋರಕ್ ಪುರದ ಬಳಿ ದೆಹಲಿ ಪೊಲೀಸರು ಮಾರ್ಚ್ ೨೦, ೨೧೦೩ ರಲ್ಲಿ ಬಂಧಿಸಿದ್ದರು.
ಲಿಯಾಕತ್ ಶಾನ ಉದ್ದೇಶದ ಬಗ್ಗೆ ದೆಹಲಿ ಮತ್ತು ಜಮ್ಮು ಕಾಶ್ಮೀರದ ಪೊಲೀಸರು ತದ್ವಿರುದ್ಧ ಹೇಳಿಕೆಗಳನ್ನು ನೀಡಿದ್ದರಿಂದ ವಿವಾದ ಸೃಷ್ಟಿಯಾಗಿತ್ತು.