ಪ್ರಧಾನ ಸುದ್ದಿ

ಬಂಗಾಳದ ಸ್ತಬ್ದಚಿತ್ರಕ್ಕೆ ಅವಕಾಶ ನೀಡಿಲ್ಲ: ಟಿಎಂಸಿ

Rashmi Kasaragodu

ಕೊಲ್ಕತ್ತಾ: ದೆಹಲಿಯ ರಾಜ್‌ಪಥ್‌ನಲ್ಲಿ ನಡೆದ ಪರೇಡ್‌ನಲ್ಲಿ ಪಶ್ಚಿಮ ಬಂಗಾಳದ ಸ್ತಬ್ದಚಿತ್ರಕ್ಕೆ ಅವಕಾಶ ಕೊಡಲಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ಪಶ್ಚಿಮ ಬಂಗಾಳದ ಕನ್ಯಾ ಶ್ರೀ ಯೋಜನೆಯ ಬಗ್ಗೆ ಸ್ತಬ್ದ ಚಿತ್ರ ತಯಾರಿಸಲಾಗಿತ್ತು. ಇದನ್ನು ಪರೇಡ್‌ನಲ್ಲಿ ಪ್ರದರ್ಶಿಸಲು ರಾಜ್ಯ ಸರ್ಕಾರ ಎಷ್ಟೇ ಮನವಿ ಮಾಡಿಕೊಂಡರೂ ಅದನ್ನು ತಿರಸ್ಕರಿಸಲಾಗಿತ್ತು ಎಂದು ಟಿಎಂಸಿ ವಕ್ತಾರ ಡೆರಿಕ್ ಓ ಬ್ರೇನ್ ಹೇಳಿದ್ದಾರೆ.

ಬ್ರೇನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸ್ತಬ್ದಚಿತ್ರದ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದೆ. ಇದು ಟಿಎಂಸಿಯ ಮನಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತಿದೆ. ಗಣರಾಜ್ಯೋತ್ಸದಂತಹಾ ದಿನದಂದು ರಾಜಕೀಯ ಪಕ್ಷಗಳು ಈ ರೀತಿಯ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಎಂದು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಹೇಳಿದ್ದಾರೆ.

ರಕ್ಷಣಾ ಇಲಾಖೆಯ ಕಾರ್ಯದರ್ಶಿಯ ನೇತೃತ್ವದಲ್ಲಿರುವ ತಜ್ಞರ ತಂಡ ಸ್ತಬ್ದಚಿತ್ರಗಳ ಆಯ್ಕೆ ಮಾಡುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಹಸ್ತಾಕ್ಷೇಪ ಇಲ್ಲ. ಸ್ತಬ್ದ ಚಿತ್ರಗಳ ಆಯ್ಕೆ ವಾರಗಳ ಹಿಂದೆಯೇ ನಡೆದಿರುತ್ತದೆ ಎಂದು ರಾವ್ ಹೇಳಿದ್ದಾರೆ.

ಬಂಗಾಳದ ವಿನೂತನ ಯೋಜನೆಯಾದ ಕನ್ಯಾ ಶ್ರೀ ವಿದೇಶ ರಾಷ್ಟ್ರಗಳಿಂದಲೂ ಉತ್ತಮ ಪ್ರತಿಕ್ರಿಯೆ ಪ್ರಾಪ್ತಿಯಾಗಿದ್ದು, ಹೆಣ್ಮಕ್ಕಳ ಸಮಾವೇಶ-2014ಕ್ಕೂ ಇದು ಆಯ್ಕೆಯಾಗಿತ್ತು.   8ರಿಂದ 12ನೇ ತರಗತಿಯಲ್ಲಿ ಓದುತ್ತಿರುವ 13-18ರ ಹರೆಯದ ಹೆಣ್ಮಕ್ಕಳಿಗೆ ವಾರ್ಷಿಕ ರು. 500 ಶಿಷ್ಯವೇತನ ನೀಡುವ ಯೋಜನೆಯಾಗಿದೆ ಇದು.

SCROLL FOR NEXT