ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರನ್ನು ಆಲಿಂಗನ ಮಾಡಿದ್ದು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝೂಕರ್‌ಬರ್ಗ್ ಮೆಚ್ಚುಗೆಗೂ ಪಾತ್ರವಾಗಿದೆ. ಝೂಕರ್‌ಬರ್ಗ್ ಈ ಐತಿಹಾಸಿಕ ಚಿತ್ರಕ್ಕೆ ಲೈಕ್ ಒತ್ತುತ್ತಿದ್ದಂತೆ ಲಕ್ಷಾಂತರ ಮಂದಿ ಲೈಕ್, ಕಾಮೆಂಟ್, ಶೇರ್ ಮಾಡತೊಡಗಿದ್ದು ದಾಖಲೆ ಸೃಷ್ಟಿಸಿದೆ.
ನರೇಂದ್ರ ಮೋದಿ ಅವರು ಒಬಾಮಾ ಅವರನ್ನು ಸ್ವಾಗತಿಸಿ, ಆಲಂಗಿಸಿದ ಫೋಟೋವನ್ನು ಪ್ರಧಾನಿ ಮೋದಿ ತಮ್ಮ ಅಧಿಕೃತ ಫೇಸ್‍ಬುಕ್ ಪೇಜ್ ಲ್ಲಿ ಪೋಸ್ಟ್ ಮಾಡಿದ್ದರು. ಈ ಚಿತ್ರವನ್ನು 4,000 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ೩೦೦೦ ಕ್ಕೂ ಅಧಿಕ ಮಂದಿ ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಇಷ್ಟೆಲ್ಲಾ ಲೈಕ್ ಕಾಮೆಂಟು ಬಂದಿರುವುದು ಫೋಟೋ ಪೋಸ್ಟ್ ಮಾಡಿದ ೨ ಗಂಟೆಗಳ ಕಾಲಾವಧಿಯಲ್ಲಿ ಅನ್ನೋದು ವಿಶೇಷ.
ಭಾನುವಾರ ರಾತ್ರಿ 8.35ರ ವರೆಗೆ ಈ ಫೋಟೋ 74,039 ಬಾರಿ ಶೇರ್ ಆಗಿದ್ದು, 47,877 ಕಾಮೆಂಟ್ ಹಾಗೂ 2,081, 278 ಲೈಕ್ ಗಿಟ್ಟಿಸಿಕೊಂಡಿದೆ.