ಮಿಸ್ ಕೊಲಂಬಿಯಾ ಪೌಲೀನಾ ವೇಗಾ 'ಭುವನ ಸುಂದರಿ'
ಭಾನುವಾರ ಮಿಯಾಮಿಯಲ್ಲಿ ನಡೆದ 2015ರ ಭುವನ ಸುಂದರಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಪೌಲೀನಾ ವೇಗಾ ಭುವನ ...
ಫ್ಲೋರಿಡಾ: ಭಾನುವಾರ ಮಿಯಾಮಿಯಲ್ಲಿ ನಡೆದ 2015ರ ಭುವನ ಸುಂದರಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಪೌಲೀನಾ ವೇಗಾ ಭುವನ ಸುಂದರಿ ಕಿರೀಟ ಗಿಟ್ಟಿಸಿಕೊಂಡಿದ್ದಾರೆ.
ಕೊಲಂಬಿಯಾದ ಬಾರಾನ್ಕ್ವಿಲ್ಲಾದವರಾಗಿರುವ ೨೨ ರ ಹರೆಯದ ವೇಗಾ ಬ್ಯುಸಿನೆಸ್ ವಿದ್ಯಾರ್ಥಿನಿ. ಪ್ರಸ್ತುತ ಸ್ಪರ್ಧೆಯಲ್ಲಿ 87 ಸ್ಪರ್ಧಿಗಳನ್ನು ಹಿಂದಿಕ್ಕಿ ಈಕೆ ಭುವನ ಸುಂದರಿ ಪಟ್ಟಕ್ಕೇರಿದ್ದಾರೆ.
ಗಾಸ್ಟನ್ ವೇಗಾ ಅವರ ಮೊಮ್ಮಗಳಾಗಿರುವ ಪೌಲೀನಾ ವೇಗಾ, ಬೊಗೋಟಾದಲ್ಲಿರುವ ಯುನಿವರ್ಸಿದಾದ್ ಜವೇರಿಯಾನದಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿದ್ಯಾರ್ಥಿನಿಯಾಗಿದ್ದಾರೆ. 8 ವರ್ಷದವಳಿರುವಾಗಲೇ ವೇಗಾ ಮಾಡೆಲ್ ಆಗಿ ಕಾಣಿಸಿಕೊಂಡಿದ್ದರು.
ಪ್ರಸ್ತುತ ಸ್ಪರ್ಧೆಯಲ್ಲಿ ಮಿಸ್ ಯುಎಸ್ಎ ನಿಯಾ ಸಾನ್ಚೆಜ್ ಪ್ರಥಮ ರನ್ನರ್ ಅಪ್ ಆದರೆ, ಮಿಸ್ ಉಕ್ರೇನ್ ಡಯಾನಾ ಹರ್ಕುಶಾ ದ್ವಿತೀಯ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.