ಇಸ್ಲಾಮಾಬಾದ್: ಭಾರತ-ಅಮೇರಿಕಾ ಸಂಬಂದ "ನಗು ಮತ್ತು ಅವಕಾಶಗಳ ಹಾಗೆ" ಆದರೆ ಪಾಕಿಸ್ತಾನ-ಭಾರತ ಸಂಬಂಧ "ಸೊಟ್ಟ ಮುಖ ಮತ್ತು ತಿಳಿವು" ಎಂದು ಪಾಕಿಸ್ತಾನದ ದಿನಪತ್ರಿಕೆ ಅಮೇರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಅವರ ಭಾರತ ಪ್ರವಾಸದ ಕೊನೆಯ ದಿನವಾದ ಮಂಗಳವಾರ ತನ್ನ ಸಂಪಾದಕೀಯದಲ್ಲಿ ಬರೆದಿದೆ.
"ಭಾರತ ಮತ್ತು ಅಮೇರಿಕಾ ತನ್ನ ನವೀಕೃತ ಗೆಳೆತನದಲ್ಲಿ ಬೆಳಗುತ್ತಿದೆ, ೨೦೦೬ರ ವಚನದಂತೆ ನಾಗರಿಕ ಅಣು ಒಪ್ಪಂದ ಈಗ ಪೂರ್ಣಗೊಳ್ಳುತ್ತಿದೆ ಹಾಗು ಕೆಲವು ಸಣ್ಣ ಪ್ರಮಾಣದ ಮಿಲಿಟರಿ ಒಪ್ಪಂದಗಳು, ಪಾಕಿಸ್ತಾನದಲ್ಲಿ ಕೆಲವು ಕಡೆ ತೀವ್ರ ಅಸಮಧಾನವನ್ನಂತೂ ಹುಟ್ಟಿಸಿದೆ" ಎಂದು ಡಾನ್ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೇಳಿದೆ.
ಪಾಕಿಸ್ತಾನ-ಅಮೇರಿಕಾ ಸಂಬಂಧಕ್ಕಿಂತಲೂ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಭಾರತ ಮತ್ತು ಅಮೇರಿಕಾ ಆರ್ಥಿಕವಾಗಿ, ರಾಜತಾಂತ್ರಿಕವಾಗಿ ಸಾಮಾನ್ಯ ಅಂಶಗಳನ್ನು ಹೊಂದಿವೆ ಎಂದಿದೆ ಡಾನ್ ಪತ್ರಿಕೆ.
"ನವದೆಹಲಿ ಮತ್ತು ವಾಶಿಂಗ್ ಟನ್ ನಡುವೆ ಹತ್ತಿರದ ಸಂಬಂಧಗಳು ಎಂದರೆ: ಇವರಿಬ್ಬರು ಪಾಕಿಸ್ತಾನದ ಭದ್ರತೆಯ ವಿಷಯಗಳ ಹಾಗೂ ಪಾಕಿಸ್ತಾನಿ ಮೂಲದ ಭಯೋತ್ಪಾದನೆ ವಿರುದ್ಧ ಒಂದಾಗಬೇಕು ಎಂದಲ್ಲ. ಬದಲಾಗಿ ಅಮೇರಿಕಾ ತನ್ನ ಪ್ರಭಾವವನ್ನು ಬಳಸಿ ನವದೆಹಲಿ ಮತ್ತು ಇಸ್ಲಾಮಾಬಾದ್ ಜೊತೆಗಿನ ಮಾತುಕತೆಯನ್ನು ಮತ್ತೆ ಪ್ರಾಂಭಿಸಲು ತಿಳಿಸಬೇಕು" ಎಂದಿದೆ ಸಂಪಾದಕೀಯ.
ಪಾಕಿಸ್ತಾನ ಮೂಲದ ಭಯೋತ್ಪಾದನೆಯ ಬಗ್ಗೆ ವಿಶ್ವದ ಕಳವಳವನ್ನು ನಿರ್ಮೂಲನೆ ಮಾಡಲು ಪಾಕಿಸ್ತಾನ ಇನ್ನೂ ಹೆಚ್ಚಿನ ಕೆಲಸ ಮಾಡಬೇಕು ಎಂದು ಕೂಡ ತಿಳಿಸಿದೆ.