ಹೊಸ ಬಜೆಟ್ ನಲ್ಲಿ ರೈಲ್ವೆ ಟಿಕೆಟ್ ದರ ಕಡಿತ ಸಾಧ್ಯತೆ ಕಡಿಮೆ: ಸುರೇಶ್ ಪ್ರಭು
ಡೀಸೆಲ್ ಬೆಲೆ ತೀವ್ರ ಇಳಿಮುಖ ಕಂಡಿದ್ದರೂ, ೨೦೧೫-೧೬ ರ ರೈಲ್ವೆ ಬಜೆಟ್ ನಲ್ಲಿ, ರೈಲು ಪ್ರಯಾಣದ
ಬೆಂಗಳೂರು: ಡೀಸೆಲ್ ಬೆಲೆ ತೀವ್ರ ಇಳಿಮುಖ ಕಂಡಿದ್ದರೂ, ೨೦೧೫-೧೬ ರ ರೈಲ್ವೆ ಬಜೆಟ್ ನಲ್ಲಿ, ರೈಲು ಪ್ರಯಾಣದ ಟಿಕೆಟ್ ದರ ಕಡಿತಗೊಳ್ಳುವ ಸಾಧ್ಯತೆ ಕಡಿಮೆ ಎಂದು ಗುರುವಾರ ರೈಲ್ವೆ ಸಚಿವ ಸುರೇಶ್ ಪ್ರಭು ಸುಳಿವು ನೀಡಿದ್ದಾರೆ.
"ರೈಲ್ವೆ ಪ್ರಯಾಣ ದರದಲ್ಲಿ ನಮಗೆ ಸಿಗುವುದು ಬರಿ ೫೦%. ಅದರಲ್ಲಿ ಈಗಾಗಲೇ ಸಬ್ಸಿಡಿ ನೀಡಲಾಗಿದೆ ಮತ್ತು ಪ್ರಯಾಣಿಕರು ಈ ಸಬ್ಸಿಡಿಯಿಂದ ಈಗಾಗಲೇ ಸಹಾಯ ಪಡೆದಿದ್ದಾರೆ" ಎಂದು ರೈಲ್ವೆ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಪ್ರಭು ತಮ್ಮ ಚೊಚ್ಚಲ ರೈಲ್ವೆ ಬಜೆಟ್ ಮುಂದಿನ ತಿಂಗಳು ಮಂಡಿಸಲಿದ್ದಾರೆ.
ಕಳೆದ ವರ್ಷದ ಜೂನ್ ನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಸುಮಾರು ೫೦% ಇಳಿಮುಖ ಕಂಡಿದ್ದು, ಭಾರತ ಸರ್ಕಾರದ ಇಂಧನ ಮಾರುಕಟ್ಟೆ ಸಂಸ್ಥೆಗಳು ಕೂಡ ಡೀಸೆಲ್ ದರವನ್ನು ಅಕ್ಟೋಬರ್ ನಿಂದ ಹಲವಾರು ಬಾರಿ ಕಡಿತಗೊಳಿಸಿದ ಪರಿಣಾಮ, ೧೦ ರಿಂದ ೧೧ ರೂ ಕಡಿಮೆಯಾಗಿದೆ. ಇದು ರೈಲ್ವೆ ಇಲಾಖೆಗೆ ಕೂಡ ಆರ್ಥಿಕವಾಗಿ ಹೆಚ್ಚು ಸಹಾಯವಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.