ಶೇಖರ್ ಸೇನ್ 
ಪ್ರಧಾನ ಸುದ್ದಿ

ಶೇಖರ್ ಸೇನ್ ಸಂಗೀತ ನಾಟಕ ಅಕಾಡೆಮಿ ನೂತನ ಅಧ್ಯಕ್ಷ

ಸಂಗೀತಕಾರ ನಟ ಶೇಖರ್ ಸೇನ್ ಅವರನ್ನು ಸಂಗೀತ ನಾಟಕ ಅಕಾಡೆಮಿಯ ನೂತನ ಅಧ್ಯಕ್ಷರನ್ನಾಗಿ

ನವದೆಹಲಿ: ಸಂಗೀತಕಾರ ನಟ ಶೇಖರ್ ಸೇನ್ ಅವರನ್ನು ಸಂಗೀತ ನಾಟಕ ಅಕಾಡೆಮಿಯ ನೂತನ ಅಧ್ಯಕ್ಷರನ್ನಾಗಿ ಸರ್ಕಾರ ಗುರುವಾರ ನೇಮಿಸಿದೆ.

ಮೂರು ದಶಕಗಳಿಂದ ಭಜನೆಯ ಸಿ ಡಿ ಆಲ್ಬಮ್ ಗಳನ್ನು ನಿರ್ಮಿಸುತ್ತಿರುವ, ಹಾಗೆಯೇ ಹಲವಾರು ಏಕಪಾತ್ರಾಭಿನಯಗಳನ್ನು ಮಾಡಿರುವ ಸೇನ್ ಅವರು ೫ ವರ್ಷಗಳ ಕಾಲ ಅಕಾಡೆಮಿ ಅಧ್ಯಕ್ಷರಾಗಿರುತ್ತಾರೆ. ಕಳೆದ ಅಕ್ಟೋಬರ್ ನಲ್ಲಿ ಲೀಲಾ ಸ್ಯಾಮ್ಸನ್ ಅವರು ರಾಜೀನಾಮೆ ನೀಡಿದ ನಂತರ ಈ ಹುದ್ದೆ ತೆರವುಗೊಂಡಿತ್ತು.

ಕಳೆದ ವಾರ ಗಣರಾಜ್ಯೋತ್ಸವದ ದಿನ ಸೇನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ತುಳಸಿ, ಕಬೀರ್, ವಿವೇಕಾನಂದ, ಸೂರ್ದಾಸ್ ಇವರುಗಳ ಏಕಪಾತ್ರಾಭಿನಯದ ಸಂಗೀತ ನಾಟಕಗಳಿಗೆ ಇವರು ಹೆಸರುವಾಸಿ.

ಸೇನ್ ಅವರ ಅಂತರ್ಜಾಲ ಪುಟದ ಪ್ರಕಾರ ಇವರು ಹಲವಾರು ಟಿ ವಿ ಧಾರಾವಾಹಿಗಳಿಗೆ ಸಂಗೀತ ನೀಡಿರುವುದಲ್ಲದೆ, ರಮಾನಂದ ಸಾಗರ ಅವರ 'ರಾಮಾಯಣದ' ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ ಕೂಡ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT