ಪ್ರಧಾನ ಸುದ್ದಿ

ಬಿಬಿಎಂಪಿ ವಿಭಜನೆ ವಿಧೇಯಕಕ್ಕೆ ಮರುಜೀವ?

Lingaraj Badiger

ಬೆಳಗಾವಿ/ಸುವರ್ಣ ವಿಧಾನಸೌಧ: ಬಿಬಿಎಂಪಿ ಚುನಾವಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ 8 ವಾರಗಳ ಕಾಲಾವಕಾಶ ನೀಡಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಬಿಬಿಎಂಪಿ ವಿಭಜನೆಗಾಗಿ ಪ್ರತ್ಯೇಕ ವಿಧೇಯಕ ಜಾರಿಗೆ ಮುಂದಾಗಿದೆ.

ಎಲ್ಲವೂ ಸರ್ಕಾರ ಅಂದುಕೊಂಡಂತೆ ನಡೆದರೆ ಈ ಅಧಿವೇಶನ ಸಂದರ್ಭದಲ್ಲೇ ಬಿಬಿಎಂಪಿ ಪುನಾರಚನೆ ವಿಧೇಯಕವನ್ನು ಸದನದಲ್ಲಿ ಮಂಡಿಸುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್ ನೀಡಿರುವ ಅವಧಿಯೊಳಗೆ ಬೆಂಗಳೂರು ವಿಭಜನೆಗಾಗಿ ಸರ್ಕಾರ ರಚಿಸಿರುವ ಬಿ.ಎಸ್.ಪಾಟೀಲ್ ಸಮಿತಿ ಮತ್ತು ವಿಧಾನ ಪರಿಷತ್ ಆಯ್ಕೆ ಸಮಿತಿ ವರದಿ ಆಧರಿಸಿ ಬಿಬಿಎಂಪಿಯನ್ನು ವಿಭಜನೆ ಮಾಡುವ ವಿಧೇಯಕವನ್ನು ಸರ್ಕಾರ ಮಂಡಿಸಲಿದೆ. ಈ ಎರಡು ಸಮಿತಿ ತನ್ನ ವರದಿಯನ್ನು ಬಹುಪಾಲು ಅಂತಿಮಗೊಳಿವೆ.

ಬೆಂಗಳೂರು ಅಂತಾರಾಷ್ಟ್ರೀಯ ಮನ್ನಣೆ ಪಡೆದ ನಗರವಾದರೂ, ಅದರ ಆಡಳಿತ ನಿರ್ವಹಣೆಗೆ ಪ್ರತ್ಯೇಕ ಕಾನೂನು ಇಲ್ಲ. ಮುನ್ಸಿಪಲ್ ಕಾಯ್ದೆ ಪ್ರಕರಾವೇ ಆಡಳಿತ ನಡೆಸಲಾಗುತ್ತಿದೆ. ಬೆಂಗಳೂರು ಆಡಳಿತ ನಿರ್ವಹಣೆಗೆ ಪ್ರತ್ಯೇಕ ಕಾಯ್ದೆ ಅಗತ್ಯ ಇರುವುದರಿಂದ ಸರ್ಕಾರ ವಿಧೇಯಕ ರಚನೆಗೆ ಚಿಂತನೆ ಮಾಡಬೇಕಾಗುತ್ತದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಹೇಳಿದ್ದಾರೆ.

SCROLL FOR NEXT