ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಮುಂದುವರೆದ ರೈತರ ಆತ್ಮಹತ್ಯೆ ಸರಣಿ: ಮತ್ತಿಬ್ಬರ ಸಾವು

ರೈತರ ಸರಣಿ ಆತ್ಮಹತ್ಯೆ ಮುಂದುವರೆದಿದ್ದು, ರಾಜ್ಯದಲ್ಲಿ ಮತ್ತೆ ಇಬ್ಬರು ರೈತರು ಆತ್ಮಹತ್ಯೆ ಶರಣಾಗಿರುವ ಘಟನೆ ಪ್ರತ್ಯೇಕ ಸ್ಥಳಗಳಲ್ಲಿ...

ಬೆಂಗಳೂರು: ರೈತರ ಸರಣಿ ಆತ್ಮಹತ್ಯೆ ಮುಂದುವರೆದಿದ್ದು, ರಾಜ್ಯದಲ್ಲಿ ಮತ್ತೆ ಇಬ್ಬರು ರೈತರು ಆತ್ಮಹತ್ಯೆ ಶರಣಾಗಿರುವ ಘಟನೆ ಪ್ರತ್ಯೇಕ ಸ್ಥಳಗಳಲ್ಲಿ ವರದಿಯಾಗಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಪಡೆಕನೂರಿನ ಗ್ರಾಮದ ಶರಣಗೌಡ ಭೀಮನಗೌಡ ಬಸರಕೋಡ್ (32) ಆತ್ಮಹತ್ಯೆಗೆ ಶರಣಾದ ರೈತ. ಸಾಲಬಾಧೆಯಿಂದ ಬೇಸತ್ತು ಜಮೀನಿನಲ್ಲಿ ವಿಷಸೇವಿಸಿದ್ದ ಈತನನ್ನು ಬಸವನಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ರೈತ ಶರಣಗೌಡ ಬಸರಕೋಡ್ ಸಾವನ್ನಪ್ಪಿದ್ದಾನೆ. ಶರಣಗೌಡ ಅವರು ದವಳಗಿಯ ಸಿಂಡಿಕೇಟ್ ಬ್ಯಾಂಕಿನಲ್ಲಿ ರು.1 ಲಕ್ಷ ಸಾಲ ಹಾಗೂ ರು.3 ಲಕ್ಷ ಕೈಸಾಲ ಪಡೆದಿದ್ದರೆಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಚೆನ್ನರಾಯಪಟ್ಟನದ ಕುರುವಂಕ ಗ್ರಾಮದ ರೈತ ತಿಮ್ಮೇಗೌಡ(38) ಎಂಬುವರು ಸಾಲಬಾಧೆ ತಾಳದೆ ಸೋಮವಾರ ತಡರಾತ್ರಿ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐದೂವರೆ ಎಕರೆ ಜಮೀನು ಹೊಂದಿದ್ದ ತಿಮ್ಮೇಗೌಡ ಅವರು ಕಬ್ಬು, ಟೊಮೆಟೊ, ಬಾಳೆ ಬೆಳೆಯುತ್ತಿದ್ದರು. ಪ್ರಸ್ತುತ ಎರಡೂವರೆ ಎಕರೆಯಲ್ಲಿ ಬಾಳೆ ಹಾಕಿದ್ದು, ಬಾಳೆ ಬೆಳೆ ನೀರಿಲ್ಲದೇ ಒಣಗುತ್ತಿತ್ತು. ನೀರಿಗಾಗಿ ಆರು ಕೊಳವೆ ಬಾವಿ ಕೊರೆಸಿದ್ದಾರೆ. ಎಲ್ಲವೂ ವಿಫಲವಾಗಿತ್ತು.
ತಿಮ್ಮೇಗೌಡ ಅವರು ಪ್ರಾಥಮಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರು.45 ಸಾವಿರ ಸಾಲ ಪಡೆದಿದ್ದರು. ಬಾಗೂರು ಕೆನರಾ ಬ್ಯಾಕ್ ನಿಂದ 2005ರಲ್ಲಿ ತಂದೆ ಹೆಸರಲ್ಲಿದ್ದ ಸಾಲ ರು.49 ಸಾವಿರ ತೀರಿಸುವಂತೆ ತಂದೆಯ ನಿಧನದ ನಂತರ ಮಗನಿಗೆ ನೊಟಿಸ್ ಬಂದಿದೆ. ಹೀಗಾಗಿ, ತಿಮ್ಮೇಗೌಡ ಅವರು ಸಾಲಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತಿಮ್ಮೇಗೌಡ ಅವರು ತಮ್ಮ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿದ್ದಾರೆ. ಅವರನ್ನು ಚನ್ನರಾಯಪಟ್ಟಣದ ಆಸ್ಪತ್ರೆಗೆ ದಾಖಲಾಯಿಸಿತಾದರು,ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ