ಶ್ರೀನಗರ: ಜಮ್ಮು ಕಾಶ್ಮೀರದ ೩೨೩ ಯುವಕರು ಶನಿವಾರ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ.
"ಜಮ್ಮು ಕಾಶ್ಮೀರದ ಬಾಣ ಸಿಂಗ್ ಕವಾಯತು ಮೈದಾನದಲ್ಲಿ ನಡೆದ ಪೆರೇಡ್ ನಲ್ಲಿ ಜಮ್ಮು ಕಾಶ್ಮೀರದ ೩೨೩ ಯುವಕರು ಸೇನೆಗೆ ಸೇರುವುದರ ಮೂಲಕ ಪ್ರದರ್ಶನ ನೀಡಿದ್ದಾರೆ" ಎಂದು ಶ್ರೀನಗರ ಮೂಲದ ಸೇನೆಯ ಲೆಫ್ಟಿನೆಂಟ್ ಕರ್ನಲ್ ಎನ್ ಎನ್ ಜೋಷಿ ತಿಳಿಸಿದ್ದಾರೆ.
"ನಿರ್ಧಿಷ್ಟ ಹೊಂದಾಣಿಕೆಯಿಂದ ಪೆರೇಡ್ ನಡೆಸಿ ತಮ್ಮ ಜೀವನವನ್ನು ದೇಶದ ರಕ್ಷಣೆಗೆ ಮುಡುಪಾಗಿಡಲು 'ಬಲಿದಾನಂ ವೀರ ಲಕ್ಷ್ಮಣ್' ರೆಜಿಮೆಂಟ್ ಹಾಡು ಹಾಡುವ ಮೂಲಕ ಇಂದು ಕಣಿವೆಯಲ್ಲಿ ಪ್ರತಿಧ್ವನಿಸಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಆರ್ ಎನ್ ನಾಯರ್ ಅವರ ಪರಿವೀಕ್ಷಣೆಯಲ್ಲಿ ನಡೆದ ಈ ಪೆರೇಡ್ ಅನ್ನು ನೋಡಲು ಯುವ ಸೈನಿಕರ ಪೋಷಕರು ಮತ್ತು ಕುಟುಂಬ ವರ್ಗ ಸಾವಿವಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಪ್ರತ್ಯೇಕವಾದಿಗಳ ಹಿಂಸೆಯಿಂದ ಭಾರತೀಯ ಸೇನೆ ಸೇರಲು ಹಿಂಜರಿಯುತ್ತಿದ್ದ ಕಣಿವೆಯ ಯುವಕರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆಬರುತ್ತಿದ್ದಾರೆ ಎಂದು ತಿಳಿದುಬಂದಿದೆ.