ನವದೆಹಲಿ: ಸಲ್ಮಾನ್ ಖಾನ್ ಅವರ ೨೦೦೨ರ 'ಹಿಟ್ ಅಂಡ್ ರನ್' ಪ್ರಕರಣದ ವಿಚಾರಣೆಯನ್ನು ಬಾಂಬೆ ಉಚ್ಛ ನ್ಯಾಯಾಲಯ ಸೋಮವಾರ ಜುಲೈ ೨೦ಕ್ಕೆ ಮುಂದೂಡಿದೆ.
ಸೆಷನ್ಸ್ ಕ್ರಿಮಿನಲ್ ನ್ಯಾಯಾಲಯದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ತೀರ್ಪಿಗೆ ಬಾಂಬೆ ಹೈಕೋರ್ಟ್ ಹಿಂದೆ ತಡೆ ನೀಡಿ ಜಾಮೀನು ನೀಡಿತ್ತು. ಹಾಗೆಯೇ ಪ್ರದರ್ಶನಕ್ಕಾಗಿ ದೇಶದಿಂದ ಹೊರಗೆ ಹೋಗಲು ೨ ಲಕ್ಷ ರೂಗಳ ಭದ್ರತೆ ನಿಡಲು ಕೂಡ ಸಲ್ಮಾನ್ ಖಾನ್ ಅವರಿಗೆ ಕೋರ್ಟ್ ತಿಳಿಸಿತ್ತು.
೨೦೦೨ರಲ್ಲಿ ನಡೆದ ಈ ದುರ್ಘಟನೆಯಲ್ಲಿ ಮದ್ಯ ಸೇವಿಸಿ ಸಲ್ಮಾನ್ ಖಾನ್ ಕಾರನ್ನು ಚಲಿಸುತ್ತಿದ್ದರಿಂದ, ಕಾರು ಫೂಟ್ಭಾತ್ ಮೇಲೆ ಜನರ ಮೇಲೆ ಹರಿದಿತ್ತು ಎಂದು ಆಪಾದಿಸಲಾಗಿತ್ತು. ಇದು ಕ್ರಿಮಿನಲ್ ನ್ಯಾಯಾಲಯದಲ್ಲಿ ಸಾಬೀತಾಗಿ ಸಲ್ಮಾನ್ ಖಾನ್ ಅವರಿಗೆ ಐದು ವರ್ಷದ ಶಿಕ್ಷೆ ನೀಡಲಾಗಿತ್ತು.
ಹಲವಾರು ಪ್ರತ್ಯಕ್ಷದರ್ಶಿಗಳ ಸಾಕ್ಷಿಯನ್ನು ಅಲ್ಲಗೆಳೆದಿದ್ದ ಸಲ್ಮಾನ್ ಖಾನ್ ತಾನು ಕಾರು ಓಡಿಸುತ್ತಿರಲಿಲ್ಲ ಎಂದೆ ವಾದಿಸಿಕೊಂಡು ಬಂದಿದ್ದರು.