ಜುಲೈ ೧೪ ೨೦೧೫: ಆಂಧ್ರಪ್ರದೇಶದ ರಾಜಮಂಡ್ರಿಯ ಗೋದಾವರಿ ಪುಷ್ಕರದಲ್ಲಿ ೨೭ ಸಾವು ಮತ್ತು ೨೫ ಕ್ಕೂ ಹೆಚ್ಚು ಜನಕ್ಕೆ ಗಾಯ. ಸತ್ತವರಲ್ಲಿ ಬಹುತೇಕ ಮಹಿಳೆಯರು.
ಅಕ್ಟೋಬರ್ ೩ ೨೦೧೪: ಪಾಟ್ನಾದ ಗಾಂಧಿ ಮೈದಾನದ ದಸರಾ ಹಬ್ಬದ ಸಂಭ್ರಮಾಚರಣೆಗಳಲ್ಲಿ ರಾವಣ ದಹನದ ನಂತರದ ಕಾಲ್ತುಳಿತದಲ್ಲಿ ೩೨ ಜನ ಸಾವು.
ಜನವರಿ ೧೮ ೨೦೧೪: ಮುಂಬೈನ ಮಲಬಾರ್ ಬೆಟ್ಟದಲ್ಲಿ, ದಾವೂದಿ ಬೋಹ್ರಾ ಆಧ್ಯಾತ್ಮ ಗುರು ಸಯೇಡ್ನ ಮೊಹಮ್ಮದ್ ಬುರ್ಹನುದ್ದೀನ್ ಅವರ ನಿವಾಸದ ಹೊರಗೆ ನಡೆದ ಕಾಲ್ತುಳಿತದಲ್ಲಿ ೧೮ ಜನ ಸಾವು.
ಅಕ್ಟೋಬರ್ ೧೩ ೨೦೧೩: ಮಧ್ಯಪ್ರದೇಶದ ರತನ್ ಘರ್ ಹಿಂದೂ ದೇವಾಲಯದ ಬಳಿ ಕಾಲ್ತುಳಿತಕ್ಕೆ ೮೯ ಸಾವು ೧೦೦ ಜನಕ್ಕೆ ಗಾಯ.
ಫೆಬ್ರವರಿ ೧೦ ೨೦೧೩: ಕುಂಭ ಮೇಳದ ಸಮಯದಲ್ಲಿ ಅಲಹಾಬಾದ್ ರೈಲುನಿಲ್ದಾಣದ ಬಳಿ ಕಾಲ್ತುಳಿತಕ್ಕೆ ೩೬ಜನ ಸಾವು.
ನವೆಂಬರ್ ೧೯ ೨೦೧೨: ಪಾಟ್ನಾದಲ್ಲಿ ಛಾತ್ ಹಬ್ಬದ ಸಮಯದಲ್ಲಿ ಘಾಟ್ ನಲ್ಲಿ ಕಾಲ್ತುಳಿತಕ್ಕೆ ೨೦ ಜನ ಬಲಿ.
ನವೆಂಬರ್ ೮ ೨೦೧೧: ಗಂಗಾ ನದಿಯ ತಟದಲ್ಲಿ, ಹರ ಕಿ ಪುರಿ ಹರಿದ್ವಾರದಲ್ಲಿ ಕಾಲ್ತುಳಿತಕ್ಕೆ ೨೨ ಸಾವು.
ಜನವರಿ ೧೪ ೨೦೧೧: ಕೇರಳದ ಶಬರಿಮಲೈ ದೇವಸ್ಥಾನದಲ್ಲಿ ಕಾಲ್ತುಳಿತದಿಂದ ೧೦೬ ಭಕ್ತಾದಿಗಳ ಸಾವು. ೧೦೦ ಜನಕ್ಕೆ ಗಾಯ.
ಮಾರ್ಚ್ ೪ ೨೦೧೦: ಉತ್ತರಪ್ರದೇಶದ ಪ್ರತಾಪ್ ಘರ್ ನ ರಾಮ್ ಜಾನಕಿ ದೇವಸ್ಥಾನದ ಬಳಿ ಸ್ವಘೋಷಿತ ದೇವಮಾನವನಿಂದ ಉಚಿತ ಬಟ್ಟೆ ಆಹಾರ ಸ್ವೀಕರಿಸಲು ನಡೆದ ಕಾಲ್ತುಳಿತದಿಂದ ೬೩ ಜನ ಸಾವು.
ಸೆಪ್ಟಂಬರ್ ೩೦ ೨೦೦೮: ನವರಾತ್ರಿ ಹಬ್ಬದ ಸಮಯದಲ್ಲಿ ರಾಜಸ್ಥಾನದ ಜೋಧ್ಪುರದ ಚಾಮುಂಡಿ ದೇವಸ್ಥಾನದ ಬೆಟ್ಟದ ಮೇಲೆ ಕಾಲ್ತುಳಿತಕ್ಕೆ ೧೨೦ ಸಾವು, ೨೦೦ಕ್ಕೂ ಹೆಚ್ಚು ಜನಕ್ಕೆ ಗಾಯ.
ಆಗಸ್ಟ್ ೩ ೨೦೦೬: ಹಿಮಾಚಲ ಪ್ರದೇಶದ ನೈನಾ ದೇವಿ ದೇವಸ್ಥಾನದಲ್ಲಿ ಆದ ಕಾಲ್ತುಳಿತಕ್ಕೆ ೧೫೦ ಭಕ್ತಾದಿಗಳ ಸಾವು, ೪೦೦ಕ್ಕೂ ಹೆಚ್ಚು ಜನಕ್ಕೆ ಗಾಯ.
ಜನವರಿ ೨೬ ೨೦೦೫: ಪಶ್ಚಿಮ ಮಹಾರಾಷ್ಟ್ರದ ಸತಾರ ಜಿಲ್ಲೆಯ ವೈ ಬಳಿಯ ಮಂಧೇರ್ ದೇವಿ ವೇವಾಲಯದ ಕಾಲ್ತುಳಿತಕ್ಕೆ ಸಿಕ್ಕಿ ೩೫೦ ಜನರ ಸಾವು. ೨೦೦ಕ್ಕೂ ಹೆಚ್ಚು ಜನಕ್ಕೆ ಗಾಯ.