ಭೂ ಸುಗ್ರೀವಾಜ್ಞೆ ಕಾಯ್ದೆಯ ವಿರುದ್ಧ ಪ್ರತಿಭಟನೆಯ ಒಂದು ದೃಶ್ಯ 
ಪ್ರಧಾನ ಸುದ್ದಿ

ಭೂಸ್ವಾಧೀನ ಸುಗ್ರೀವಾಜ್ಞೆ ಕಾಯ್ದೆ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಮತ್ತೆ ನೋಟಿಸ್

೨೦೧೩ರ ಭೂಸ್ವಾಧೀನ ಸುಗ್ರೀವಾಜ್ಞೆ ಕಾಯ್ದೆಯಲ್ಲಿ, ಜಮೀನನ್ನು ಸ್ವಾಧೀನಪಡಿಸ್ಕೊಳ್ಳುವ ಕಾನೂನನ್ನು ಸಡಿಲಪಡಿಸಿ ತಿದ್ದುಪಡಿ ತಂದು ದ್ವಿತೀಯ ಬಾರಿಗೆ

ನವದೆಹಲಿ: ೨೦೧೩ರ ಭೂಸ್ವಾಧೀನ ಸುಗ್ರೀವಾಜ್ಞೆ ಕಾಯ್ದೆಯಲ್ಲಿ, ಜಮೀನನ್ನು ಸ್ವಾಧೀನಪಡಿಸ್ಕೊಳ್ಳುವ ಕಾನೂನನ್ನು ಸಡಿಲಪಡಿಸಿ ತಿದ್ದುಪಡಿ ತಂದು ದ್ವಿತೀಯ ಬಾರಿಗೆ ಮರುಪ್ರಕಟನೆ ಹೊರಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸಂಸತ್ ಅಧಿವೇಶನ ನಡೆಯುವಾಗ ಈ ಸುಘ್ರೀವಾಜ್ಞೆಯನ್ನು ಸರ್ಕಾರ ಹೊರಡಿಸಿದ್ದು ಇದು ಸಂವಿಧಾನಕ್ಕೆ ಕೇಂದ್ರ ಸರ್ಕಾರ ಎಸಗಿದ ಅಪಚಾರ ಎಂದು ಹಿರಿಯ ವಕೀಲ ಜೈಸಿಂಗ್ ಕೋರ್ಟ್ ಗೆ ತಿಳಿಸಿದ್ದರಿಂದ ನ್ಯಾಯಮೂರ್ತಿ ಜಗದೀಶ್ ಸಿಂಗ್ ಕೇಹಾರ್ ಮತ್ತು ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ಒಳಗೊಂಡ ಅಪೆಕ್ಸ್ ನ್ಯಾಯಾಲಯ ಪೀಠ  ನೋಟಿಸ್ ಜಾರಿ ಮಾಡಿದೆ.

ಈ ಹಿಂದೆ ಈ ಭೂಸುಗ್ರೀವಾಜ್ಞೆ ಮತ್ತು ಅದರ ಮೊದಲ ಮರುಪ್ರಕಟಣೆಯ ವಿರುದ್ಧ ಪ್ರಶ್ನಿಸಿ ದೆಹಲಿ ಗ್ರಾಮೀಣ ಸಮಾಜ ಕೋರ್ಟ್ ಮೊರೆ ಹೋಗಿತ್ತು.

ಈ ಹಿಂದೆ ದೆಹಲಿ ಗ್ರಾಮೀಣ ಸಮಾಜ ಪ್ರಶ್ನಿಸಿದ್ದಾಗಲೂ ಎರಡು ಬಾರಿ ಸರ್ಕಾರಕ್ಕೆ ನೋಟಿಸ್ ನೀಡಿದ್ದರೂ, ಸರ್ಕಾರ ಉತ್ತರಿಸುವ ಗೋಜಿಗೆ ಹೋಗಿಲ್ಲ ಎಂದು ಕೋರ್ಟ್ ಗಮನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT