ಪ್ರಧಾನ ಸುದ್ದಿ

ಅಸ್ಸಾಮಿನಲ್ಲಿ ಹಿಂದಿ ಭಾಷಿಕರ ಕೊಲೆ: ಗೊಗೋಯ್ ಜೊತೆ ರಾಜನಾಥ್ ಸಿಂಗ್ ಮಾತುಕತೆ

Guruprasad Narayana

ನವದೆಹಲಿ: ಅಸ್ಸಾಮಿನ ತಿನ್ಸುಕಿಯಾನಲ್ಲಿ ಹಿಂದಿ ಭಾಷಿಕ ಉದ್ಯಮಿ ಮತ್ತು ಪುತ್ರಿಯನ್ನು ಶಂಕಿತ ಉಲ್ಫಾ ಉಗ್ರಗಾಮಿಗಳು ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ತಿನ್ಸುಕಿಯಾ ಪ್ರದೇಶದಲ್ಲಿ ಇಬ್ಬರು ಹಿಂದಿ ಭಾಷಿಕರು ಕೊಲೆಯಾದ ನಂತರದ ಪರಿಸ್ಥಿಯನ್ನು  ದೂರವಾಣಿ ಸಂಭಾಷಣೆ ವೇಳೆಯಲ್ಲಿ ಗೊಗೋಯ್, ಗೃಹ ಮಂತ್ರಿಗಳಿಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

"ಕಾನೂನು ಸುವ್ಯವಸ್ಥೆಗೆ ರಾಜ್ಯ ಈಗಾಗಲೇ ಭದ್ರತಾ ಪಡೆಗಳನ್ನು ತಿನ್ಸುಕಿಯಾ ಪ್ರದೇಶಕ್ಕೆ ನಿಯೋಜಿಸಿದೆ ಎಂದು ಗೊಗೋಯ್ ತಿಳಿಸಿದ್ದಾರೆ. ಹೆಚ್ಚುವರಿ ಭದ್ರಾತಾ ಪಡೆಗಳನ್ನು ಸೇರಿ ಯಾವುದೇ ಅಗತ್ಯ ಸಹಾಯ ನೀಡಲು ಕೇಂದ್ರ ಸರ್ಕಾರ ಸಿದ್ಧ" ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿರುವುದಾಗಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಮಂಗಳವಾರ ರಾತ್ರಿ ಉಲ್ಫಾ ಉಗ್ರಗಾಮಿಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ನಂದಲಾಲ್ ಷಾ(೬೫) ಮತ್ತು ಪುತ್ರಿ ಕಾಜೋಲ್ ಷಾ(೨೧) ಮೃತಪಟ್ಟಿದ್ದು, ಅವರ ಪತ್ನಿ ಹಾಗು ಮತ್ತೊಬ್ಬ ಸಂಬಂಧಿಕರಿಗೆ ತೀವ್ರವಾಗಿ ಗಾಯಗಳಾಗಿವೆ.

ಈ ಕೊಲೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಂದ ಕಳೆದ ಎರಡು ದಿನಗಳಿಂದ ನಗರದಲ್ಲಿ ಸಾಮಾನ್ಯ ಜೀವನಕ್ಕೆ ಧಕ್ಕೆಯಾಗಿದೆ.

SCROLL FOR NEXT