ಹೈಕೋರ್ಟ್ 
ಪ್ರಧಾನ ಸುದ್ದಿ

ಬಿಬಿಎಂಪಿ ಚುನಾವಣೆ ಮಧ್ಯಪ್ರವೇಶಕ್ಕೆ ಹೈಕೋರ್ಟ್ ನಕಾರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿ ದಂತೆ `ಬಿದ್ರೂ ಮೀಸೆ ಮಣ್ಣಾಗಿಲ್ಲ' ಎಂಬ ಸರ್ಕಾರದ ತೋರ್ಪಡಿಕೆಗೆ....

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿ ದಂತೆ `ಬಿದ್ರೂ ಮೀಸೆ ಮಣ್ಣಾಗಿಲ್ಲ' ಎಂಬ ಸರ್ಕಾರದ ತೋರ್ಪಡಿಕೆಗೆ ಮತ್ತೊಮ್ಮೆ
ಭಾರಿ ಹಿನ್ನ್ನಡೆ ಉಂಟಾಗಿದೆ. ಈ ಮೂಲಕ ಪಾಲಿಕೆ ಚುನಾವಣೆ ವೇಳಾಪಟ್ಟಿ ಕುರಿತಾದ ವಿವಾದಕ್ಕೆ ಹೈಕೋರ್ಟ್ ಮಧ್ಯೆ ಪ್ರವೇಶಿಸಲು ನಿರಾಕರಿಸಿದೆ. ರಾಜ್ಯ ಚುನಾವಣೆ ಆಯೋಗ ವೇಳಾ ಪಟ್ಟಿ ಹಿಂಪಡೆದಿದ್ದನ್ನು ಪ್ರಶ್ನಿಸಿ ದಾಖಲಾ ಗಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣೆ ಆಯೋಗದ ಪರ ವಕೀಲರು `ಈಗಾಗಲೇ ಪಾಲಿಕೆ ಚುನಾವಣೆ ವೇಳಾ ಪಟ್ಟಿ ಅ„ಸೂಚನೆ ಪ್ರಕಟಿಸಿರುವುದಾಗಿ' ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾ. ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ವೇಳಾಪಟ್ಟಿ ಸೇರಿ ಯಾವುದೇ ಆಕ್ಷೇಪವಿದ್ದರೂ ಸುಪ್ರೀಂ ಕೋರ್ಟ್‍ನಲ್ಲಿ ಬಗೆಹರಿಸಿಕೊಳ್ಳಿ ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ವಾದ ಮಂಡಿಸಿ, ಪಾಲಿಕೆ ಚುನಾವಣೆ ನಡೆಸಲು ಸುಪ್ರೀಂ 8 ವಾರಗಳ ಸಮಯ ನೀಡಿದೆ. ಅಷ್ಟರಲ್ಲಾಗಲೇ ಆಯೋಗ ವೇಳಾಪಟ್ಟಿ ಪ್ರಕಟಿಸುತ್ತಿರುವುದು ಸುಪ್ರೀಂನ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ. ಸದ್ಯ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕಾನೂನು ದುರ್ಬಳಕೆಗೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ಈ ಅರ್ಜಿ ಪರಿಗಣಿಸಬಾರದು. ಅಲ್ಲದೇ 8 ವಾರಗಳ ಕಾಲಾವಕಾಶ ಯಾವಾಗಿಂದ ಎಂದು ಸ್ಪಷ್ಟವಾಗಿಲ್ಲ ಎಂದಿದೆ.

ಈ ಕುರಿತು ಸ್ಪಷ್ಟೀಕರಣ ನೀಡುವಂತೆ ಕೋರಿ ಸರ್ಕಾರ ಸುಪ್ರೀಂನ ಮೊರೆ ಹೋಗಿದ್ದು, ಆ ಅರ್ಜಿ ಇದೇ ಜು.20ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ. ಆದ್ದರಿಂದ ಅರ್ಜಿ ಕುರಿತು ಮುಂದಿನ ಯಾವುದೇ ಆದೇಶ ಹೊರಡಿಸಬಾರದು ಎಂದು ವಾದಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಚುನಾವಣ ಆಯೋಗದ ಪರ ವಕೀಲರಾದ ಕೆ.ಎನ್. ಫಣೀಂದ್ರ, ಈಗಾಗಲೇ ಆಯೋಗ ಚುನಾವಣಾ ವೇಳಾಪಟ್ಟಿ ಅಧಿಸೂಚನೆ ಪ್ರಕಟಿಸಿದೆ. ಒಮ್ಮೆ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿ, ಪ್ರಕ್ರಿಯೆ ಆರಂಭಿಸಿದ ಮೇಲೆ ಯಾವ ಕಾರಣಕ್ಕೂ ಚುನಾವಣೆ ತಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಪೊನ್ನಸ್ವಾಮಿ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ. ಆದ್ದರಿಂದ ಆಯೋಗದ ಕ್ರಮಕ್ಕೆ ತಡೆ ನೀಡುವುದರಲ್ಲಿ ಅರ್ಥವಿಲ್ಲ  ಎಂದು ವಾದಿಸಿದರು. ವಾದ ವಿವಾದ ಆಲಿಸಿದ ವಿಭಾಗೀಯ ಪೀಠ, ಈಗಾಗಲೇ ಆಯೋಗ ಚುನಾವಣೆ ಅ„ಸೂಚನೆ ಪ್ರಕಟಿಸಿದ್ದು, ಅದನ್ನು ತಡೆ ಹಿಡಿಯಲು ಸಾಧ್ಯವಿಲ್ಲ. ಚುನಾವಣೆ ವೇಳಾಪಟ್ಟಿ ಸೇರಿ ಯಾವುದೇ ಆಕ್ಷೇಪವಿದ್ದರೂ ಸುಪ್ರೀಂ ಕೋರ್ಟ್‍ನಲ್ಲೇ ಬಗೆಹರಿಸಿಕೊಳ್ಳಿ ಎಂದು ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಮೂಡದ ಒಮ್ಮತ: ಈ ಮಧ್ಯೆ ಬಿಬಿಎಂಪಿ ವಿಧೇಯಕಕ್ಕೆ ವಿಧಾನ ಪರಿಷತ್‍ನಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಚಿಸಲ್ಪಟ್ಟಿರುವ ಸೆಲೆಕ್ಟಿಂಗ್ ಕಮಿಟಿಯಲ್ಲಿ ಒಮ್ಮತ ಮೂಡಿಲ್ಲ. ಏಳು ಸುತ್ತು ಸಭೆ ನಡೆದರೂ ಯಾವುದೇ  ತೀರ್ಮಾನಕ್ಕೆ ಬರಲಾಗಿಲ್ಲ ಎಂದು ಸಮಿತಿ ಸದಸ್ಯರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ, ಬಿಜೆಪಿ ಮತ್ತು ಜೆಡಿಎಸ್ನ ಸದಸ್ಯರು ಬಿಬಿಎಂಪಿ ವಿಧೇಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಂದರೆ ಸಮಿತಿಯಲ್ಲಿರುವ ಸದಸ್ಯರ ಪೈಕಿ 7 ಮಂದಿ ತಮ್ಮ ಸಮ್ಮತಿ ಸೂಚಿಸಿಲ್ಲ. ಆರು ಮಂದಿ ಮಾತ್ರ ಸರ್ಕಾರದ ಆಶಯವನ್ನು ಬೆಂಬಲಿಸಿದ್ದಾರೆ. ಕನ್ನಡಪ್ರಭಕ್ಕೆ ಮಾಹಿತಿ ನೀಡಿರುವ ಸಮಿತಿ ಅಧ್ಯಕ್ಷ ಎಸ್.ಆರ್. ಪಾಟೀಲ್, ಸೋಮವಾರ ವರದಿಯನ್ನು ಮಂಡಿಸುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!