ಪ್ರಧಾನ ಸುದ್ದಿ

ಶೀಘ್ರದಲ್ಲೇ ರಾಜ್ಯಕ್ಕೆ ಬರುತ್ತೆ ಲೋಕಪಾಲ

ಬೆಂಗಳೂರು: ಲೋಕಾಯುಕ್ತರ ನೇಮಕ, ಪದಚ್ಯುತಿ ಹಾಗೂ ವಿಜೆಲೆನ್ಸಿ ಕಮಿಟಿ ರಚನೆಗೆ ಸಂಬಂಧಿಸಿದಂತೆ ಲೋಕಪಾಲ ಮಾದರಿಯಲ್ಲಿಯೇ ರಾಜ್ಯದ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಪ್ರಸಕ್ತ ಅಧಿವೇಶನದಲ್ಲಿಯೇ ಮಂಡಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಅಧ್ಯಕ್ಷತೆಯಲ್ಲಿ ಸೋಮವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯು ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಲೋಕಾಯುಕ್ತರ ಪದಚ್ಯುತಿಗೆ ಉಂಟಾಗಿರುವ ಕಾನೂನಾತ್ಮಕ ಅಡಚಣೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿದ ಬಳಿಕ ಲೋಕಾಯುಕ್ತ ಸಂಸ್ಥೆ ಬಲವರ್ಧನೆಗೆ ಕೈಗೊಳ್ಳಬೇಕಾದ ತಿದ್ದುಪಡಿ ವಿಷಯಗಳನ್ನು ಅಂತಿಮಗೊಳಿಸಿದೆ. ಕೇಂದ್ರದ ಲೋಕಾಪಾಲ ಮಾದರಿ ಯನ್ನೇ ರಾಜ್ಯದಲ್ಲಿ ಅನುಸರಿಸಲು ಸಂಪುಟ ಮುಂದಾಗಿದೆ.

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯು ಈಗ ತೀವ್ರ ಹಾಗೂ ಗೊಂದಲದ ಗೂಡಾಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಾಗೆ ತಿದ್ದುಪಡಿ ತರಬೇಕೆಂದು ರಾಜಕೀಯ ಪಕ್ಷ ಗಳು, ನಿವೃತ್ತ ನ್ಯಾಯಾಧೀಶರು, ವಿವಿಧ ಸಂಘಟನೆಗಳು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಸಂಪುಟದ ನಿರ್ಣಯ ಮಹತ್ವ ಪಡೆದುಕೊಂಡಿದೆ.

ಇತರೆ ಪ್ರಮುಖ ನಿರ್ಣಯಗಳು

  • ಕಲಬುರ್ಗಿಯಲ್ಲಿ ಕೆಎಟಿ ಪೀಠ ಸ್ಥಾಪನೆ
  • ಕೃಷಿ ಭೂಮಿ ಖರೀದಿಗೆ ಇದ್ದ ಆದಾಯ ಮಿತಿ 2 ಲಕ್ಷದಿಂದ 25 ಲಕ್ಷಕ್ಕೆ ಏರಿಕೆ
  • ಸಿವಿಲ್ ಸೇವೆಗಳ ನೇರ ನೇಮಕಾತಿ ಹುದ್ದೆಗಳಿಗೆ ಮಹಿಳೆಯರಿಗಿದ್ದ ಮೀಸಲಾತಿ ಪ್ರಮಾಣ ಶೇ.30ರಿಂದ ಶೇ.33ಕ್ಕೆ ಹೆಚ್ಚಳ
ಲೋಕಪಾಲ ರಚನೆ
SCROLL FOR NEXT