ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದೆ.
ಬೆಂಗಳೂರಿನಲ್ಲಿ ಶ್ರೀನಿವಾಸ ಗೌಡ ಹಾಗೂ ಶಂಕರೇ ಗೌಡ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನಿನ್ನೆ ಅಶೋಕ್ ಕುಮಾರ್ ಎಂಬುವವರನ್ನ ಬಂಧಿಸಲಾಗಿತ್ತು.
ಇಂದು ಬಂಧಿತರಾಗಿರುವ ಇಬ್ಬರು ಆರೋಪಿಗಳು ಅಶೋಕ್ ಕುಮಾರ್ ಸಹಚರರು ಎಂದು ಹೇಳಲಾಗುತ್ತಿದೆ. ವಿಶೇಷ ತನಿಖಾ ದಳದ ಮುಖ್ಯಸ್ಥ ಎಡಿಜಿಪಿ ಕಮಲ್ ಪಂಥ್ ನೇತೃತ್ವದ ವಿಶೇಷ ತನಿಖಾ ದಳ ಅಶೋಕ್ ಕುಮಾರ್ ರನ್ನು ಬಂಧಿಸಿತ್ತು. ಇದೀಗ ಮತ್ತಿಬ್ಬರ ಆರೋಪಿಗಳನ್ನು ಎಸ್ ಐಟಿ ಬಂಧಿಸಿದ್ದು, ವಿಚಾರಣೆ ಮುಂದುವರೆಸಿದೆ.