ತೆಲುಗು ದೇಸಂ ಪಕ್ಷದ ಸಂಸದರಿಂದ ಸಂಸತ್ತು ಹೊರಗೆ ಪ್ರತಿಭಟನೆ 
ಪ್ರಧಾನ ಸುದ್ದಿ

ಮತ್ತೆ ಸಂಸತ್ ಕಲಾಪ ಮುಂದೂಡಿಕೆ

ಸಂಸತ್ ಕಲಾಪದ ಮೂರನೇ ದಿನವಾದ ಗುರುವಾರ ಸಹ ಉಭಯ ಸದನಗಳಲ್ಲಿ ವಿರೋಧಪಕ್ಷದ ನಾಯಕರು ತೀವ್ರ ಗದ್ದಲ, ಕೋಲಾಹಲವೆಬ್ಬಿಸಿದ ಕಾರಣ ಲೋಕಸಭಾ ಕಲಾಪವನ್ನು ನಾಳೆಗೆ ಹಾಗೂ ರಾಜ್ಯ ಸಭೆ...

ನವದೆಹಲಿ:ಸಂಸತ್ ಕಲಾಪದ ಮೂರನೇ ದಿನವಾದ ಗುರುವಾರ ಸಹ ಉಭಯ ಸದನಗಳಲ್ಲಿ ವಿರೋಧಪಕ್ಷದ ನಾಯಕರು ತೀವ್ರ ಗದ್ದಲ, ಕೋಲಾಹಲವೆಬ್ಬಿಸಿದ ಕಾರಣ ಲೋಕಸಭಾ ಕಲಾಪವನ್ನು ನಾಳೆಗೆ ಹಾಗೂ ರಾಜ್ಯ ಸಭೆ ಕಲಾಪವನ್ನು ಅಪರಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಲೋಕಸಭೆಯಲ್ಲಿಂದು ವಿಪಕ್ಷ ಸದಸ್ಯರು ಎಂದಿನಂತೆ ಸುಷ್ಮಾ ಸ್ವರಾಜ್ ರಾಜೀನಾಮೆಗೆ ಒತ್ತಾಯಿಸಿದರು.ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಪ್ಪು ರಿಬ್ಬನ್ ನ್ನು ಧರಿಸಿ ಬಂದಿದ್ದರು. ಆರೋಪಗಳಿಗೆ ಚರ್ಚೆ ನಡೆಸುವ ಸರ್ಕಾರದ ಪ್ರಸ್ತಾಪವನ್ನು ಅವರು ತಿರಸ್ಕರಿಸಿದರು.

ಪ್ರತಿಭಟನೆಯನ್ನು ಹತ್ತಿಕ್ಕುವುದು ಪ್ರಧಾನಿ ಮೋದಿಯವರ ತಂತ್ರ. ಅವರು ನಮಗೆ ಅಥವಾ ಈ ದೇಶದ ಜನರಿಗೆ ಉತ್ತರ ನೀಡುವುದಿಲ್ಲ. ಸುಶ್ಮಾ ಸ್ವರಾಜ್ ಅವರು ಅಪರಾಧವೆಸಗಿದ್ದಾರೆ ಎಂದು ಅವರು ಆರೋಪಿಸಿದರು.

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ ಹನುಮಂತ ರಾವ್ 2 ಸಾವಿರ ಕೋಟಿ ರೂಪಾಯಿಗಳ ವ್ಯಾಪಂ ಹಗರಣ ಎಂಬ ಪೋಸ್ಟರ್ ನ್ನು ಸದನದ ಮುಂದೆ ಪ್ರದರ್ಶಿಸಿ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಸರ್ಕಾರ ಪ್ರತಿತಂತ್ರ:ಸಂಸತ್ತು ಕಲಾಪ ನಡೆಯಲು ಅಡ್ಡಿಪಡಿಸುವ ಪ್ರತಿಪಕ್ಷಗಳಿಗೆ ಸಡ್ಡು ಹೊಡೆಯಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಭ್ರಷ್ಟಾಚಾರವನ್ನು ಎತ್ತಿಹಿಡಿಯಲು ನಿರ್ಧರಿಸಿದೆ.

ಈ ಕುರಿತು ಪ್ರಧಾನಿ ಮೋದಿ ತಮ್ಮ  ಸಂಪುಟದ ಸಚಿವರೊಂದಿಗೆ ಮಾತುಕತೆ ನಡೆಸಿದರು. ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಕುರಿತು ಚರ್ಚಿಸಿದರು.

ಈ ಮಧ್ಯೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಯಾವ ಸಚಿವರು ರಾಜೀನಾಮೆ ನೀಡುವುದಿಲ್ಲ. ಸದನದಲ್ಲಿ ಆರೋಪ ಕುರಿತು ಚರ್ಚೆ ನಡೆಸಲು ಆಡಳಿತ ಪಕ್ಷ ಸಿದ್ಧವಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!