ಮೈಸೂರು: ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ದಿ. ಡಾ. ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು ಮುಸ್ಲಿಂ ಧರ್ಮಿಯರಾದರೂ ಭಗವದ್ಗೀತೆಯನ್ನು ಓದುತ್ತಿದ್ದರು.
ಅಬ್ದುಲ್ ಕಲಾಂ ಅವರಿಗೆ ಮೈಸೂರು ರಾಜಮನೆತನದ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಹೀಗಾಗಿ ಕಲಾಂ ನಾಲ್ಕು ಬಾರಿ ಅರಮನೆಗೆ ಭೇಟಿ ನೀಡಿದ್ದರು. ಮೈಸೂರಿಗೆ ಲಲಿತ್ ಮಹಲ್ ಅರಮನೆಯ 222ನೇ ಕೊಠಡಿಯಲ್ಲಿ ಖಾಯಂ ಆಗಿ ತಂಗುತ್ತಿದ್ದರು. ಈ ವೇಳೆ ಭಗವದ್ಗೀತೆ, ಕುರಾನ್, ಬೈಬಲ್ ಗಳನ್ನು ಓದುತ್ತಿದ್ದರು.
ಕಲಾಂ ನಾಲ್ಕುನೇ ಬಾರಿ ಮೈಸೂರಿಗೆ ಆಗಮಿಸಿದ್ದಾಗ ಅರಮನೆಯಲ್ಲಿ ಮೂರು ಪುಸ್ತಕಗಳನ್ನು ಮರೆತು ಬಿಟ್ಟು ಹೋಗಿದ್ದರು. ಅವುಗಳನ್ನು ಪ್ರಸ್ತುತ ಅರಮನೆ ಸಿಬ್ಬಂದಿ ವಶಕ್ಕೆ ಪಡೆದು ಹೋಟೆಲ್‌ನ ಶೋಕೇಸ್‌ನಲ್ಲಿಟ್ಟು ಸುರಕ್ಷಿತವಾಗಿ ಕಾಪಾಡುತ್ತಿದ್ದಾರೆ.