ಲೋಕಾಯುಕ್ತ ನ್ಯಾ. ವೈ.ಭಾಸ್ಕರ್‍ರಾವ್ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

15 ದಿನ ರಜೆ ಮೇಲೆ ತೆರಳಿದ ನ್ಯಾ.ಭಾಸ್ಕರ್ ರಾವ್

ಲೋಕಾಯುಕ್ತ ಕಚೇರಿ ಭ್ರಷ್ಟಾಚಾರ ಹಗರಣದ ಬಗ್ಗೆ ಪ್ರತಿಭಟನೆ, ಒತ್ತಡಗಳಿಗೆ ಮಣಿಯದ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್‍ರಾವ್ ಅವರು, ತಮ್ಮ ಪುತ್ರ ಅಶ್ವಿನ್ ರಾವ್ ಬಂಧನವಾಗುತ್ತಿದ್ದಂತೆ 15 ದಿನ ರಜೆ ಹಾಕಿದ್ದಾರೆ. ಸೋಮವಾರ ಕಚೇರಿಗೆ ಆಗಮಿಸಿದ್ದ ಲೋಕಾಯುಕ್ತ...

ಬೆಂಗಳೂರು: ಲೋಕಾಯುಕ್ತ ಕಚೇರಿ ಭ್ರಷ್ಟಾಚಾರ ಹಗರಣದ ಬಗ್ಗೆ ಪ್ರತಿಭಟನೆ, ಒತ್ತಡಗಳಿಗೆ ಮಣಿಯದ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್‍ರಾವ್ ಅವರು, ತಮ್ಮ ಪುತ್ರ ಅಶ್ವಿನ್ ರಾವ್ ಬಂಧನವಾಗುತ್ತಿದ್ದಂತೆ 15 ದಿನ ರಜೆ ಹಾಕಿದ್ದಾರೆ. ಸೋಮವಾರ ಕಚೇರಿಗೆ ಆಗಮಿಸಿದ್ದ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್‍ರಾವ್, ಮಗನ ಬಂಧನದ ಸುದ್ದಿ ಬರುತ್ತಿದ್ದಂತೆ ಮಧ್ಯಾಹ್ನ ಬೇಗನೆ ಮನೆಗೆ ಮರಳಿದ್ದರು.

ಲೋಕಾಯುಕ್ತ ಸಂಸ್ಥೆಯ ಉಸ್ತುವಾರಿ ರಜಿಸ್ಟ್ರಾರ್ ಟಿ. ಗೋಪಾಲಕೃಷ್ಣ ರೈ ಅವರಿಗೆ ಪತ್ರ ಬರೆದು 15 ದಿನಗಳ ಕಾಲ ರಜೆ ಮೇಲೆ ತೆರಳಿದ್ದಾರೆ. ವೈ. ಭಾಸ್ಕರ್ ರಾವ್ ಹಿಂತಿರುಗುವವರೆಗೆ ಸಂಸ್ಥೆಯ ಆಡಳಿತದ ಜವಾಬ್ದಾರಿಯನ್ನು ಉಸ್ತುವಾರಿ ರಿಜಿಸ್ಟ್ರಾರ್ ನೋಡಿಕೊಳ್ಳಲಿದ್ದಾರೆ. ಪ್ರಕರಣದ ಸಂಬಂಧ ರಾಜಿನಾಮೆಗೆ ಒತ್ತಾಯಿಸಿ ಸುಮಾರು 1 ತಿಂಗಳ ನಿರಂತರವಾಗಿ ಪ್ರತಿಭಟನೆ, ಒತ್ತಾಯ ಕೇಳಿಬಂದರೂ ರಾಜಿನಾಮೆ ನೀಡದೆ ರಜೆಯನ್ನು ಹಾಕದೆ ಭಾಸ್ಕರ್ ರಾವ್ ನಿಗದಿತ ವೇಳೆಗೆ ಕಚೇರಿಗೆ ಆಗಮಿಸುತ್ತಿದ್ದರು.

ರಾಜಿನಾಮೆ ವದಂತಿಗೆ ತೆರೆ: ಪುತ್ರನ ಬಂಧನವಾಗುತ್ತಿದ್ದಂತೆ ಭಾಸ್ಕರ್ ರಾವ್ ರಾಜಿನಾಮೆ ನೀಡುತ್ತಾರೆ ಎನ್ನುವ ವದಂತಿ ಹಬ್ಬಿದ್ದವು, ಆದರೆ, ಪುತ್ರನ ಬಂಧನವಾಗುತ್ತಿದ್ದಂತೆ ರಜೆ ಮೇಲೆ ತೆರಳಿರುವ ಲೋಕಾಯುಕ್ತರು ನಗರದ ಅಧಿಕೃತ ನಿವಾಸದಲ್ಲಿ ಇಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಆದರೆ, ಹೈದರಾಬಾದ್‍ಗೆ ಹೋಗಿದ್ದಾರೋ ಅಥವಾ ಅಜ್ಞಾತವಾಸದಲ್ಲಿದ್ದರೋ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಲೋಕಾಯುಕ್ತ ಸಿಬ್ಬಂದಿಗೂ ಯಾವುದೇ ಮಾಹಿತಿ ಇಲ್ಲ. ಉಸ್ತುವಾರಿ ರಿಜಿಸ್ಟ್ರಾರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಭಾಸ್ಕರ್‍ರಾವ್ ಅವರು ಸುದೀರ್ಘ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ಪುತ್ರನ ಬಂಧನ ಬಳಿಕ ಮುಂದಿನ ನಡೆಯ ಕುರಿತು ಮಾತುಕತೆ ನಡೆಸಲಾಗಿದ್ದು, ರಾಜಿನಾಮೆ ನೀಡಿದ ಬಳಿಕ ತಮ್ಮ ಬಂಧನವಾಗುವ ಸಾಧ್ಯತೆ ಇರಬಹುದೇ ಎಂಬುದರ ಬಗ್ಗೆ
ಚರ್ಚಿಸಿದರು ಎಂದು ಮೂಲಗಳು ಹೇಳಿವೆ. ಲೋಕಾಯುಕ್ತರು ಇತ್ತೀಚೆಗಷ್ಟೆ ಒಂದು ವಾರ ರಜೆ ಮೇಲೆ ತೆರಳಿದ್ದರು. ಆಗ ವೈಯಕ್ತಿಕ ಕಾರಣ ನೀಡಿ ರಜೆ ಹಾಕಿದ್ದ ಲೋಕಾಯುಕ್ತರು, ಈ ಬಾರಿ ಯಾವುದೇ ಕಾರಣ ನೀಡಿಲ್ಲ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಸಂಘರ್ಷ ತೀವ್ರ: Hormuz ಜಲಸಂಧಿ ಬಳಿ ಅಮೆರಿಕ ಭೀಕರ ವೈಮಾನಿಕ ದಾಳಿ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ..!

ಬದಲಾದ ಸಂಸತ್ ಬಲಾಬಲದ ನಡುವೆ ಮುಂಗಾರು ಅಧಿವೇಶನ; ಜು.19 ರಂದು ಸರ್ವಪಕ್ಷಗಳ ಸಭೆ; ಜಿದ್ದಾಜಿದ್ದಿನ ರಾಜಕೀಯಕ್ಕೆ ವೇದಿಕೆ ಸಜ್ಜು..!

Bangkok pubನಲ್ಲಿ ಭೀಕರ ಅಗ್ನಿ ಅವಘಡ; 27 ಮಂದಿ ಸಜೀವ ದಹನ; 63ಕ್ಕೂ ಹೆಚ್ಚು ಮಂದಿಗೆ ಗಾಯ, ವಿದ್ಯುತ್ ದೋಷವೇ ದುರಂತಕ್ಕೆ ಕಾರಣ?

ರಾಹುಲ್ ದ್ರಾವಿಡ್ ಇಂಗ್ಲೆಂಡ್ ಟೆಸ್ಟ್ ತಂಡದ ಮುಂದಿನ ಕೋಚ್ ಆಗ್ತಾರಾ?

ನಾಳೆ ಅರ್ಧಕ್ಕೆ ಹಾರಲಿದೆ ತ್ರಿವರ್ಣ ಧ್ವಜ; ದೇಶಾದ್ಯಂತ ಶೋಕಾಚರಣೆ: ಕತಾರ್‌ನ ಮಾಜಿ ಅಮೀರ್ ನಿಧನಕ್ಕೆ PM ಮೋದಿ ಸಂತಾಪ