ಶಿವಮೊಗ್ಗದ ಶೇಖರಬೋವಿ (35) ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ನರಗಿನ ಕೆರೆ ರುದ್ರೇಶಪ್ಪ (60) ಸಾವನ್ನಪ್ಪಿರುವ ದುರ್ದೈವಿಗಳು.
ವಿಷಸೇವಿಸಿದ್ದ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಿವಮೊಗ್ಗ ವರದಿ
ಶೇಖರಬೋವಿ ತನ್ನ ಒಂದು ಎಕರೆ ಜಮೀನಿನ ಜತೆಗೆ 10 ಎಕರೆ ಜಮೀನನ್ನು ಗುತ್ತಿಗೆ ಪಡೆದು ಸಾಗುವಳಿ ಮಾಡುತ್ತಿದ್ದ. ಎಸ್‌ಬಿಎಂ ಬ್ಯಾಂಕ್‌ನಿಂದ 3 ಲಕ್ಷ ರೂ.ಸಾಲ ಹಾಗೂ 90 ಸಾವಿರ ಕೈ ಸಾಲ ಮಾಡಿದ್ದರು.
ಅಲ್ಲದೆ ತಮ್ಮ ಬಳಿ ಇದ್ದ ಚಿನ್ನಾಭರಣಗಳನ್ನೂ ಅಡವಿಟ್ಟು ಸಾಲ ಮಾಡಿದ್ದರು. ಸಾಲದ ಹೊರೆ ಹೆಚ್ಚಾಗಿದ್ದರಿಂದ ಮನನೊಂದಿದ್ದ ಶೇಖರ ಈ ತಿಂಗಳ 23 ರಂದು ವಿಷಸೇವಿಸಿದ್ದರು. ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಶೇಖರ ನಿನ್ನೆ ರಾತ್ರಿ ಕೊನೆಯುಸಿಳೆದರು. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ ವರದಿ
ನರಗಿನ ಕೆರೆ ರೈತ ರುದ್ರೇಶಪ್ಪ, ಮೈಸೂರು ಪೇಪರ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದು ನಿವೃತ್ತಿ ನಂತರ, ತಮ್ಮ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದರು. ಸಾಲದ ಬಾಧೆ ತಾಳಲಾರದೆ ನಿನ್ನೆ ವಿಷ ಸೇವಿಸಿದ್ದರು.
ಗ್ರಾಮಸ್ಥರು, ರುದ್ರೇಶಪ್ಪ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸೇರಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.