ವಿಧಾನಮಂಡಲ ಅಧಿವೇಶನ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಭೂ ಕಂದಾಯ ತಿದ್ದುಪಡಿ ಕಾಯ್ದೆಗೆ ಅಸ್ತು

ಕರ್ನಾಟಕ ಭೂ ಕಂದಾಯ ಕಾಯ್ದೆ 94ಸಿ ಪ್ರಕಾರ ಸರ್ಕಾರಿ ಭೂಮಿಯಲ್ಲಿ ವಾಸಿಸುವ ಉದ್ದೇಶಕ್ಕೆ ಮಾಡಿಕೊಂಡ ಅಕ್ರಮ ಭೂ ಸ್ವಾಧೀನದ ಮಿತಿಯನ್ನು 2,400 ಚದರ ಅಡಿಯಿಂದ 4,000 ಚದರ ಅಡಿಗೆ ವಿಸ್ತರಿಸುವ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಶುಕ್ರವಾರ ಅಂಗೀಕಾರ ದೊರೆತಿದೆ...

ವಿಧಾನಸಭೆ: ಕರ್ನಾಟಕ ಭೂ ಕಂದಾಯ ಕಾಯ್ದೆ 94ಸಿ ಪ್ರಕಾರ ಸರ್ಕಾರಿ ಭೂಮಿಯಲ್ಲಿ ವಾಸಿಸುವ ಉದ್ದೇಶಕ್ಕೆ ಮಾಡಿಕೊಂಡ ಅಕ್ರಮ ಭೂ ಸ್ವಾಧೀನದ ಮಿತಿಯನ್ನು 2,400 ಚದರ ಅಡಿಯಿಂದ 4,000 ಚದರ ಅಡಿಗೆ ವಿಸ್ತರಿಸುವ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಶುಕ್ರವಾರ ಅಂಗೀಕಾರ ದೊರೆತಿದೆ.

ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಮಂಡಿಸಿದ ಈ ವಿಧೇಯಕದ ಬಗ್ಗೆ ಪಕ್ಷಭೇದ ಮರೆತು ಸಲಹೆ ನೀಡಲಾಗಿದೆಯಾದರೂ ಅಂತಿಮವಾಗಿ ಗ್ರಾಮೀಣ ಪ್ರದೇಶದ
ತುರ್ತು ಅಗತ್ಯವನ್ನು ಆಧರಿಸಿ ಸದನ ಅನುಮತಿ ನೀಡಿದೆ. ವಿಧೇಯಕ ಮಂಡನೆಯಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದರು. ಮಹತ್ವದ ವಿಧೇಯಕಗಳನ್ನು ಅ„ವೇಶನದ ಕೊನೆಯ ದಿನ ಮಂಡಿಸುವ ಸರ್ಕಾರದ ಕ್ರಮದ ಬಗ್ಗೆ ಆಕ್ಷೇಪಿಸಿದರು. ಆಗ ತಾಳ್ಮೆ ಕಳೆದುಕೊಂಡ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಹಲವು ಸಂದರ್ಭದಲ್ಲಿ ಪ್ರತಿಪಕ್ಷದವರಲ್ಲೇ ಹೊಂದಾಣಿಕೆ ಇರುವುದಿಲ್ಲ. ಪರಿಸ್ಥಿತಿಯ ಲಾಭ ಪಡೆಯುವುದಕ್ಕೆ ಪೈಪೋಟಿ ನಡೆಯುತ್ತಿರುತ್ತದೆ ಎಂದು ವ್ಯಂಗ್ಯವಾಡಿದಾಗ, ಸದನದಲ್ಲಿ ಇನ್ನಷ್ಟು ಗದ್ದಲ ಸೃಷ್ಟಿಯಾಯಿತು.

ಕೊನೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪನವರೇ ಮಧ್ಯ ಪ್ರವೇಶ ಮಾಡಿ, ಅವರು ಏನೋ ಮಾತಾಡ್ತಾರೆ ಬಿಡ್ರಿ ಎಂದು ಪ್ರತಿಪಕ್ಷ ಸದಸ್ಯರನ್ನು ಸಮಾಧಾನ ಮಾಡಿದರು.
ಚರ್ಚೆ ಯಲ್ಲಿ ಕಾಂಗ್ರೆಸ್‍ನ ರಮೇಶ್‍ಕುಮಾರ್, ಪ್ರಮೋದ್ ಮಧ್ವರಾಜ್, ಕೆ.ಬಿ. ಕೋಳಿವಾಡ, ಪ್ರಸನ್ನಕುಮಾರ್, ಬಿಜೆಪಿಯ ಜಗದೀಶ್ ಶೆಟ್ಟರ್, ಸೇರಿದಂತೆ ಹಲ ವರು ಭಾಗವಹಿಸಿದ್ದರು. ಅಂತಿಮ ವಾಗಿ ಅಂಗೀಕಾರ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ