ಚೆನ್ನೈ: ನೆಸ್ಟ್ಲೆ ಕಂಪನಿ ಮ್ಯಾಗಿ ಸೇರಿದಂತೆ ನಾಲ್ಕು ಬ್ರಾಂಡ್ಗಳ ನೂಡಲ್ಸ್ನ ತಯಾರಿಕೆ, ಮಾರಾಟ ಹಾಗೂ ಸಂಗ್ರಹವನ್ನು ತಮಿಳುನಾಡು ಸರ್ಕಾರ ಮಂಗಳವಾರ ನಿಷೇಧಿಸಿದೆ.
ಮೂರು ತಿಂಗಳುಗಳ ಕಾಲ ಈ ನಾಲ್ಕು ಬ್ರಾಂಡ್ ನೂಡಲ್ಸ್ಗೆ ತಮಿಳುನಾಡು ಸರ್ಕಾರ ನಿಷೇಧ ಹೇರಿದ್ದು, ಈ ಕೂಡಲೇ ಅಂಗಡಿಗಳಲ್ಲಿರುವ ಸಂಗ್ರಹವನ್ನು ವಾಪಸ್ ಪಡೆಯುವಂತೆ ಕಂಪನಿಗಳಿಗೆ ಸೂಚಿಸಲಾಗಿದೆ.
ಮ್ಯಾಗಿ ನೂಡಲ್ಸ್, ವೈ ವೈ ಎಕ್ಸ್ಪ್ರೆಸ್ ನೂಡಲ್ಸ್, ರಿಲಾಯನ್ಸ್ ಸೆಲೆಕ್ಟ್ ಇನ್ಸ್ಸ್ಟಂಟ್ ನೂಡಲ್ಸ್ ಹಾಗೂ ಸ್ಮಿತ್ ಮತ್ತು ಜಾನ್ಸ್ ಚಿಕನ್ ನೂಡಲ್ಸ್ಗೆ ತಮಿಳುನಾಡಿನಲ್ಲಿ ನಿಷೇಧ ಹೇರಲಾಗಿದೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮ್ಯಾಗಿಯಲ್ಲಿ ವಿಷಕಾರಿ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಈಗಾಗಲೇ ಕೇರಳ, ದೆಹಲಿ, ಉತ್ತರಾಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮ್ಯಾಗಿಗೆ ನಿಷೇಧ ಹೇರಲಾಗಿದೆ.