ಪ್ರಧಾನ ಸುದ್ದಿ

ಮಲಾಲಾ ಮೇಲೆ ದಾಳಿ ಮಾಡಿದ ತಪ್ಪಿತಸ್ಥರ ರಹಸ್ಯ ಬಿಡುಗಡೆ

Guruprasad Narayana

ಲಂಡನ್: ಆಘಾತಕಾರಿ ಬೆಳವಣಿಗೆಯಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲ ಯೂಸಫ್ ಝಾಯಿ ಮೇಲೆ ದಾಳಿ ಮಾಡಿದ್ದ ಹಾಗು ನ್ಯಾಯಲಾಯದಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗಿ ಬಂಧನಕ್ಕೊಳಾಗಿದ್ದ ೧೦ ಜನರಲ್ಲಿ ೮ ಜನರನ್ನು ಬಂಧಿಸಿದ ಕೆಲವೇ ವಾರಗಳಲ್ಲಿ ರಹಸ್ಯವಾಗಿ ಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿದೆ.

ಧೀರಾ ಯುವ ಹೋರಾಟಗಾರ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ೧೦ ತಾಲಿಬಾನಿ ಉಗ್ರನ್ನು ಬಂಧಿಸಿರುವುದಾಗಿ ಕೊಚ್ಚಿಕೊಂಡಿದ್ದ ಪಾಕಿಸ್ತಾನಿ ಅಧಿಕಾರಿಗಳನ್ನು ಟೀಕಿಸಿರುವ ದ ಮಿರರ್ ಪತ್ರಿಕೆ ಇದು ಪಿತೂರಿ ಎಂದಿದೆ.

ಮೂಲಗಳ ಪ್ರಕಾರ ವಿಚಾರಣೆಗೆ ವಿಶ್ವಾಸಾರ್ಹತೆಯೇ ಇಲ್ಲ. ಇಡಿ ಗ್ಯಾಂಗಿಗೆ ೨೫ ವರ್ಷಗಳ ಶಿಕ್ಷೆ ನೀಡಿದ್ದರೂ, ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವವರು ಇಬ್ಬರು ಮಾತ್ರ ಎಂದು ತಿಳಿದುಬಂದಿದೆ.

ತನ್ನ ೧೪ ವರ್ಷದ ವಯಸ್ಸಿನಲ್ಲಿ ದಾಳಿಗೊಳಗಾಗಿದ್ದ ಮಲಾಲಾಗೆ ನ್ಯಾಯ ಒದಗಿಸಲು  ದಾಳಿಕೋರರನ್ನು ಕಳೆದ ಸೆಪ್ಟಂಬರ್ ನಲ್ಲಿ ಬಂಧಿಸಲಾಗಿತ್ತು.

ಬಂದೂಕುಧಾರಿಗಳು ಮಲಾಳಗೆ ಮೂರು ಸುತ್ತಿನ ಗುಂಡು ಹಾರಿಸಿದ್ದರು ಮತ್ತು ಅದು ಮಲಾಲಾಗೆ ಹಣೆ ಮತ್ತು ಭುಜಕ್ಕೆ ತೀವ್ರ ಗಾಯ ಮಾಡಿತ್ತು. ದಾಳಿಯ ನಂತರ ಪ್ರಜ್ಞೆ ಕಳೆದುಕೊಂಡಿದ್ದ ಮಾಲಾಲಳನ್ನು ಇಂಗ್ಲೆಂಡಿನ ಆಸ್ಪತ್ರೆಯಲ್ಲಿ ಸುಶ್ರೂಷೆ ಮಾಡಲಾಗಿತ್ತು.

೨೦೧೪ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕೂಡ ಮಲಾಲಾ ಪಡೆದಿದ್ದರು.

SCROLL FOR NEXT