ಪ್ರಧಾನ ಸುದ್ದಿ

ಅಮರ್ತ್ಯಾ ಸೇನ್ ನಳಂದಾ ಆಡಳಿತ ಮಂಡಲಿಯಲ್ಲಿ ಮುಂದುವರೆಯಲಿದ್ದಾರೆ: ಕುಲಪತಿ

Guruprasad Narayana

ನವದೆಹಲಿ: ನಳಂದಾ ವಿಶ್ವವಿದ್ಯಾಲಯಕ್ಕೆ ನೂತನವಾಗಿ ನೇಮಕಗೊಂಡಿರುವ ಕುಲಪತಿ ಜಾರ್ಜ್ ಯೋ ಅವರು ತಮ್ಮ ಪೂರ್ವಾಧಿಕಾರಿ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯಾ ಸೇನ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ ಮುಂದುವರೆಯಲಿದ್ದರೆ ಎಂದು ತಿಳಿಸಿದ್ದಾರೆ. ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ ಸೇನ್ ಅಧ್ಯಕ್ಷಸ್ಥಾನವನ್ನು ಈ ಮೊದಲು ತೊರೆದಿದ್ದರು.

"ನಾನು ಅಮರ್ತ್ಯಾ ಸೇನ್ ಅವರ ಜಾಗವನ್ನು ತುಂಬುವುದು ಅತಿ ಕಷ್ಟದ ಕೆಲಸ. ಅವರ ಒಳ್ಳೆಯ ಕೆಲಸವನ್ನು ಮುದುವರೆಸಲು ಹಾಗು ಸಿಬ್ಬಂದಿಗಳಿಗೆ ಸಹಕಾರ ನೀಡಲು ನಾನು ಕೈಮೀರಿ ಪ್ರಯತ್ನಿಸುತ್ತೇನೆ. ನಳಂದ ವಿಶ್ವವಿದ್ಯಾಲಯದ ವಿಶ್ವಪ್ರಸಿದ್ಧಿಗೆ ಶ್ರಮಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ.

"ಅಮರ್ತ್ಯಾ ಸೇನ್ ಅವರು ಮಂಡಲಿಯಲ್ಲಿ ಮುಂದುವರೆಯುತ್ತಾರೆ ಎಂದು ತಿಳಿದು ನನಗೆ ನಿರಾಳವಾಗಿದೆ" ಎಂದು ವಿಶ್ವವಿದ್ಯಾಲಯದಲ್ಲಿ ಸೇನ್ ಅವರ ಪಾತ್ರದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ್ದಾರೆ.

ಸಿಂಗಪುರದ ಮಾಜಿ ವಿದೇಶಾಂಗ ಸಚಿವ ಯೋ ಅವರು ಜುಲೈ ೧೭ ರಿಂದ ಆಡಳಿತ ಮಂಡಲಿಯ ಅಧ್ಯಕ್ಷರಾಗಿ ಸೇನ್ ಅವರನ್ನು ಬದಲಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮೇ ೩೦ ರಂದು ಘೋಷಿಸಿತ್ತು.

ತಮ್ಮನ್ನು ಎರಡನೆ ಅವಧಿಗೆ ನೇಮಿಸುವಂತೆ ಮಂಡಲಿ ಶಿಪಾರಸ್ಸು ಮಾಡಿದ್ದರೂ ಕೆಂದ್ರ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳದಿದ್ದನ್ನು ವಿರೋಧಿಸಿ ಫೆಬ್ರವರಿಯಲ್ಲಿ ಅಮರ್ತ್ಯಾ ಸೇನ್ ಅವರು ರಾಜೀನಾಮೆ ನೀಡಿದ್ದರು. ಬಹಶಃ ಸರ್ಕಾರ ವಿಶ್ವವಿದ್ಯಾಲಯದ ನಾಯಕತ್ವವನ್ನು ಬದಲಿಸಲು ಇಚ್ಚಿಸಿದೆ ಎಂದು ಮೋದಿ ಸರ್ಕಾರದ ವಿರುದ್ಧ ಆ ವೇಳೆ ಸೇನ್ ದೂರಿದ್ದರು.

SCROLL FOR NEXT