ಇಸ್ಲಾಮಾಬಾದ್: ಆತ್ಮಹತ್ಯಾ ಬಾಂಬ್ ದಾಳಿ ಹಾಗು ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಪಾಕಿಸ್ತಾನ ಅಫ್ಘಾನಿಸ್ತಾನ ಗಡಿಯ ಉತ್ತರ ವಾಜಿರಿಸ್ಥಾನದಲ್ಲಿ ನಡೆದ ಕಾಳಗದಲ್ಲಿ ಸೋಮವಾರ ಕನಿಷ್ಠ ೧೯ ಭಯೋತ್ಪಾದಕರು ಹಾಗೂ ೭ ಜನ ಸೈನಿಕರು ಮೃತಪಟ್ಟಿದ್ದಾರೆ.
ಅಂತರ ಸೇವಾ ಸಾರ್ವಜನಿಕ ಸಂಪರ್ಕ ಸಂಸ್ಥೆಯ ಪ್ರಕಾರ ಆಫ್ಘಾನಿಸ್ಥಾನದ ಗಡಿಯ ಉತ್ತರ ವಾಜಿರಿಸ್ಥಾನದಲ್ಲಿ ತೀವ್ರ ಗುಂಡಿನ ಕಾಳಗ ನಡೆಯಿತೆಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಭದ್ರತಾ ಪಡೆಗಳು ಭಯೋತ್ಪಾದಕರನ್ನು ಅಟ್ಟಿಸಿಕೊಂಡು ಹೋಗಿ ಸುತ್ತುವರೆದಾಗ ಆತ್ಮಹತ್ಯಾ ಬಾಂಬ್ ಇದ್ದ ಜ್ಯಾಕೆಟ್ ತೊಟ್ಟಿದ್ದ ಭಯೋತ್ಪಾದಕನೊಬ್ಬ ಸ್ಫೋಟಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಐದು ಜನ ಅಧಿಕಾರಿಗಳು ಒಳಗೊಂಡಂತೆ ಏಳು ಜನ ಸೈನಿಕರು ಈ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.