ಚೆನ್ನೈ: ಪೈಲೆಟ್ ಸೇರಿ ಮೂವರು ಚಾಲಕ ಸಿಬ್ಬಂದಿಯನ್ನು ಹೊತ್ತು ಪ್ರಯಾಣಿಸುತ್ತಿದ್ದ ಕರಾವಳಿ ಗಸ್ತು ಪಡೆಯ ಹೆಲಿಕಾಪ್ಟರ್ ಬಂಗಾಳ ಕೊಲ್ಲಿಯಲ್ಲಿ ಪತನವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ನಿನ್ನೆ ಸಂಜೆ 5.30ರ ವೇಳೆಗೆ ಚೆನ್ನೈನ ಏರ್ ಬೇಸ್ ನಿಂದ ಪುದುಚೆರಿಗೆ ಹೊರಟಿದ್ದ ಹೆಲಿಕಾಪ್ಟರ್ ರಾತ್ರಿ 10.30ರ ವೇಳೆಗೆ ತನ್ನ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು.
ಚೆನ್ನೈನ ಏರ್ ಬೇಸ್ ನಲ್ಲಿ ಆಪರೇಷನ್ ಆಮ್ಲ ಅಭ್ಯಾಸ ನಡೆಯುತ್ತಿದ್ದು, ರಾತ್ರಿಯಿಂದ ಸಂಪರ್ಕ ಕಳೆದುಕೊಂಡಿರುವ ಚೆನ್ನೈ ಏರ್ ವೇಸ್ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನವಾಗಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಬಂಗಾಳ ಕೊಲ್ಲಿ ಹಾಗೂ ಪುದುಚೆರೆ, ಕಡಲೂರು ವ್ಯಾಪ್ತಿಯಲ್ಲಿ ಭಾರತೀಯ ನೌಕಾಸೇನೆಯ ಒಂಭತ್ತು ಹಡಗುಗಳ ಶೋಧ ಕಾರ್ಯ ಕೈಗೊಂಡಿದೆ.