ಪದ್ಮಶ್ರೀ ವಾರಿಯರ್ 
ಪ್ರಧಾನ ಸುದ್ದಿ

ಸಿಸ್ಕೋ ಮುಖ್ಯ ತಂತ್ರಜ್ಞಾನ ಅಧಿಕಾರಿ ಹುದ್ದೆಯಿಂದ ಪದ್ಮಶ್ರೀ ವಾರಿಯರ್ ನಿರ್ಗಮನ

ಸಿಸ್ಕೋದ ಮುಖ್ಯ ತಂತ್ರಜ್ಞಾನ ಅಧಿಕಾರಿ ಹುದ್ದೆಯಿಂದ ಭಾರತೀಯ ಸಂಜಾತೆ ಪದ್ಮಶ್ರೀ ವಾರಿಯರ್ ಕೆಳಗಿಳಿದಿದ್ದಾರೆ. ಅವರು ಇದೇ ಸೆಪ್ಟೆಂಬರ್ ವರೆಗೆ ಕಂಪೆನಿಯ ಸಲಹೆಗಾರ್ತಿಯಾಗಿ ಹುದ್ದೆ ಅಲಂಕರಿಸಲಿದ್ದಾರೆ...

ನ್ಯೂಯಾರ್ಕ್ : ಅಮೆರಿಕ ಮೂಲದ ಮಾಹಿತಿ ತಂತ್ರಜ್ಞಾನ ದೈತ್ಯ ಕಂಪೆನಿ ಸಿಸ್ಕೋದ ಮುಖ್ಯ ತಂತ್ರಜ್ಞಾನ ಅಧಿಕಾರಿ ಹುದ್ದೆಯಿಂದ ಭಾರತೀಯ ಸಂಜಾತೆ ಪದ್ಮಶ್ರೀ ವಾರಿಯರ್ ಕೆಳಗಿಳಿದಿದ್ದಾರೆ. ಅವರು ಇದೇ ಸೆಪ್ಟೆಂಬರ್ ವರೆಗೆ  ಕಂಪೆನಿಯ ಸಲಹೆಗಾರ್ತಿಯಾಗಿ ಹುದ್ದೆ ಅಲಂಕರಿಸಲಿದ್ದಾರೆ.

 ಕಂಪೆನಿಯ ಉನ್ನತ ಅಧಿಕಾರಿಗಳ ಹುದ್ದೆಗಳ ಪ್ರಮುಖ ಪುನರ್ರಚನೆಯಿಂದಾಗಿ ಈ ಬದಲಾವಣೆಯಾಗಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.

ಫೋರ್ಬ್ಸ್ ಮ್ಯಾಗಜೀನ್ ಬಿಡುಗಡೆ ಮಾಡಿದ, ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 84ನೇ ಸ್ಥಾನ ಪಡೆದಿದ್ದ ಪದ್ಮಶ್ರೀ ವಾರಿಯರ್ ಈ ತಕ್ಷಣದಿಂದಲೇ ಹೊಸ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಕಂಪೆನಿಯ ತಂತ್ರಜ್ಞಾನ, ವ್ಯಾಪಾರ ವಿಸ್ತರಣೆ ಕುರಿತು ಕಂಪೆನಿಗೆ ಸಲಹೆ-ಸೂಚನೆ ನೀಡಲಿದ್ದಾರೆ.

ಸಿಸ್ಕೋದ ಹೊಸ ಕಾರ್ಯಕಾರಿ ಸಮಿತಿಯ 10 ಮಂದಿ ನಾಯಕರಲ್ಲಿ ಭಾರತ ಮೂಲದ ಪಂಕಜ್ ಪಟೇಲ್ ಇದ್ದಾರೆ. 2008ರಲ್ಲಿ ಸಿಸ್ಕೋ ಕಂಪೆನಿಗೆ ಸೇರಿದ್ದ ಪದ್ಮಶ್ರೀ ವಾರಿಯರ್ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ನೂತನ ತಾಂತ್ರಿಕ ಅಧಿಕಾರಿ ಚಂಕ್ ರಾಬಿನ್ಸ್, ವಾರಿಯರ್ ಅವರು ಅತೀ ಗೌರವಾನ್ವಿತ ನಾಯಕರಾಗಿದ್ದು, ಕಂಪೆನಿಯ ಶ್ರೇಯಸ್ಸಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

Dimple Queen: ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! Video ವೈರಲ್

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

CNG ರೀಫಿಲ್ ವೇಳೆ ಭೀಕರ ಸ್ಫೋಟ; NH-48ರಲ್ಲಿ ಭಯಾನಕ ಘಟನೆ, ಬದುಕಿದ್ದೇ ಅಚ್ಚರಿ! Video