ನವದೆಹಲಿ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದಿದೆ.
ಕಾಂಗ್ರೆಸ್ ಆಡಳಿತದ ಹಾಗೂ ಬಿಜೆಪಿಯೇತರ ಪಕ್ಷಗಳ ಆಡಳಿತದ ರಾಜ್ಯಗಳ ಜೊತೆ ಕೆಂದ್ರದ ಎನ್ ಡಿ ಎ ಸರ್ಕಾರ ಒಳ್ಳೆಯ ಸಂಬಂಧ ಇಟುಕೊಳ್ಳದ್ದಕೆ ರಾಜಕೀಯ ರಣತಂತ್ರವನ್ನು ಹೆಣೆಯಲು ಈ ಸಭೆ ಕರೆಯಲಾಗಿದೆ.
ಸದ್ಯಕ್ಕೆ ಕೇರಳ ಕರ್ನಾಟಕ, ಅಸ್ಸಾಂ, ಹಿಮಾಚಲ ಪ್ರದೇಶ, ಉತ್ತರಾಖಂಡ, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ. ಕೇರಳ ಮತ್ತು ಅಸ್ಸಾಂ ಮುಂದಿನ ವರ್ಷ ಚುನಾವಣೆಗೆ ಹೋಗಲಿರುವ ರಾಜ್ಯಗಳಾಗಿದ್ದು ಈ ಎರಡೂ ರಾಜ್ಯಗಳ ಮುಖಮಂತ್ರಿಗಳನ್ನು ಪ್ರತ್ಯೇಕವಾಗಿ ಸೋನಿಯಾ ಗಾಂಧಿ ಭೇಟಿ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಈ ಭೇಟಿಯಲ್ಲಿ ಸಂಸತ್ ಆಯ್ಕೆ ಸಮಿತಿ ಮುಂದಿರುವ ಜಿ ಎಸ್ ಟಿ ಕಾಯ್ದೆಯನ್ನು ಚರ್ಚಿಸಲಾಗುವುದು ಎನ್ನಲಾಗಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಹಿರಿಯ ಮುಖಂಡರು ಹಾಗು ಪ್ರಧಾನ ಕಾರ್ಯದರ್ಶಿಗಳು ಕೂಡ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿದುಬಂದಿದೆ.
೨೦೧೪ರ ಲೋಕಸಭಾ ಚುನಾವಣೆಗಳ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಮುಖ್ಯಮಂತ್ರಿಗಳ ಸಭೆ ಕರೆದಿರುವುದು.