ರಾಮಲಿಂಗಾ ರೆಡ್ಡಿ 
ಪ್ರಧಾನ ಸುದ್ದಿ

14 ಜಿಲ್ಲೆಗಳಲ್ಲಿ ಶೀಘ್ರ ನಗರ ಸಾರಿಗೆ

ರಾಜ್ಯದ 14 ಪ್ರಮುಖ ಜಿಲ್ಲಾ ಮತ್ತು ಪಟ್ಟಣ ಕೇಂದ್ರಗಳಲ್ಲಿ 'ನಗರ ಸಾರಿಗೆ ಬಸ್' ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿ 1080 ಬಸ್ಗಳನ್ನು ...

ಬೆಂಗಳೂರು: ರಾಜ್ಯದ 14 ಪ್ರಮುಖ ಜಿಲ್ಲಾ ಮತ್ತು ಪಟ್ಟಣ ಕೇಂದ್ರಗಳಲ್ಲಿ 'ನಗರ ಸಾರಿಗೆ ಬಸ್' ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿ 1080 ಬಸ್ಗಳನ್ನು ಖರೀದಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ರಾಜ್ಯದಲ್ಲಿ 34 ಪ್ರಮುಖ ನಗರಗಳಲ್ಲಿ ನಗರ ಸಾರಿಗೆ ಸೌಲಭ್ಯ ಕಲ್ಲಿಸಲು ಸರ್ಕಾರ ಈ ಹಿಂದೆಯೇ ನಿರ್ಧರಿಸಿತ್ತು. ಅದರಂತೆ ಈಗಾಗಲೇ 20 ನಗರಗಳಲ್ಲಿ ನಗರ ಸಾರಿಗೆ ಸೌಲಭ್ಯ ಒದಗಿಸಿದೆ. ಇನ್ನುಳಿದ 14 ಜಿಲ್ಲೆಗಳಲ್ಲಿ ಇನ್ನೆರಡು ತಿಂಗಳಲ್ಲಿ ನಗರ ಬಸ್ಗಳನ್ನು ಸಂಚಾರಕ್ಕೆ ಬಿಡಲಾಗುವುದು. ಇದಕ್ಕಾಗಿ ಸರ್ಕಾರ ಟಾಟಾ ಕಂಪನಿಯಿಂದ 1080 ಬಸ್ಗಳನ್ನು ಖರೀದಿಸಲಾಗುತ್ತಿದ್ದು, ಸದ್ಯದಲ್ಲೇ ಸರ್ಕಾರದ ವಶಕ್ಕೆ ಬರಲಿವೆ ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

ತುಮಕೂರು, ಮೈಸೂರು, ಹಾಸನ ಸೇರಿದಂತೆ 20 ನಗರಗಳಲ್ಲಿ ನಗರ ಸಾರಿಗೆ ಸೌಲಭ್ಯವಿದೆ. ಆದರೆ ಅಲ್ಲಿ ಬಸ್ಗಳ ಕೊರತೆ ಇದೆ. ಆದ್ದರಿಂದ ಅಗತ್ಯ ಇರುವ ಕಡೆ ಬಸ್ಗಳನ್ನು ಒದಗಿಸಲಾಗುತ್ತಿದೆ. ಹಾಗೆಯೇ ಉದ್ದೇಶಿತ 14 ನಗರಗಳಿಗೆ ಬಸ್ಗಳನ್ನು ಒದಗಿಸಲಾಗುವುದು.

ಸದ್ಯದಲ್ಲೇ ಬೆಳಗಾವಿ, ಶಿರಸಿ, ಕಾರವಾರ, ಬಾಗಲಕೋಟೆ, ಹಾವೇರಿ ರಾಣೆಬೆನ್ನೂರು, ಹುಬ್ಬಳ್ಲಿ-ಧಾರವಾಡ, ಸಿಂಧನೂರು, ವಿಜಯಪುರ, ಗಂಗಾವತಿ, ಬಳ್ಳಾರಿ ನಗರಗಳಲ್ಲಿ ಸಾರಿಗೆ ನಿಗಮದ ಬಸ್ಗಳಲ್ಲದೇ ಪ್ರತ್ಯೇಕ ನಗರ ಸಾರಿಗೆ ಬಸ್ಗಳು ಸಂಚರಿಸಲಿವೆ ಎಂದರು.

ಬೆಂಗಳೂರಿನಲ್ಲಿ ಟು ಸ್ಟ್ರೋಕ್ ಆಟೋಗಳನ್ನು ನಿಷೇಧಿಸುವ ಬಗ್ಗೆ ಕೂಡ ಅಗತ್ಯ ಕ್ರಮಕೈಗೊಳ್ಳುತ್ತಿದ್ದು, ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ