ಬೆಂಗಳೂರು/ ನವದೆಹಲಿ: ಕರ್ನಾಟಕದಿಂದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಮೂವರು ಯುವಕರು, ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಮೃತಪಟ್ಟಿದ್ದಾರೆ. ಅವರಲ್ಲಿ ಇಬ್ಬರು ಬೆಂಗಳೂರಿನವರು.
ದೆಹಲಿಯಿಂದ ಇತ್ತೀಚಿಗಷ್ಟೆ ಬಂದಿರುವ ಗುಪ್ತಚರ ಸಂಸ್ಥೆಯ ವರದಿಯಲ್ಲಿ ಈ ಯುವಕರು ಎರಡು ವರ್ಷದ ಮುಂಚೆಯೇ ಇಸ್ಲಾಮಿಕ್ ಸ್ಟೇಟ್ ಸೇರಿದ್ದು, ಇರಾಕ್ ಮತ್ತು ಸಿರಿಯಾದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸದೆ.
ಈ ಯುವಕರನ್ನು ಕಾಕ್ಸ್ ಟೌನ್ ನ ಫಯಾಜ್ ಮಸೂದ್, ಶಿವಾಜಿ ನಗರದ ಉಮರ್ ಸುಭಾನ್, ಮತ್ತು ಉತ್ತರ ಕರ್ನಾಟಕದ ವಿಜಯಪುರದ ಅಬ್ದುಲ್ ಖುದ್ದೂಸ್ ತುರ್ಕಿ ಎಂದು ಗುರುತಿಸಲಾಗಿದೆ. ಭಯೋತ್ಪಾದನಾ ಸಂಘಟನೆಯ ವಿರುದ್ಧ ಅಮೇರಿಕಾ ಮಿತ್ರ ರಾಷ್ಟ್ರಗಳು ನಡೆಸಿದ ದಾಳಿಯಲ್ಲಿ ಈ ಮೂವರೂ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಫಯಾಜ್ ೨೦೧೩ ರಲ್ಲಿ ಕತಾರ್ ಗೆ ತೆರಳಿ ಅಲ್ಲಿಂದ ಸಿರಿಯಾ ಗೆ ತೆರಳಿದ್ದರೆ, ಉಮರ್ ೨೦೦೮ರಲ್ಲಿ ಯೆಮನ್ ಗೆ ತೆರಳಿ ನಂತರ ಇಸ್ಲಾಮಿಕ್ ಸ್ಟೇಟ್ ಸೇರಿದ್ದರು.
ಫಯಾಜ್ ಅವರ ಮನೆಗೆ ಭೇಟಿ ನೀಡಿ ಮಾತನಾಡಲು ಪ್ರಯತ್ನಿಸಿದಾಗ ಅವರ ಕುಟುಂಬ ವರ್ಗ "ನಾನು ಅವನ (ಫಯಾಜ್) ಬಗ್ಗೆ ಮಾತನಾಡಲು ಇಷ್ಟವಿಲ್ಲ. ಅವನ ಬಗ್ಗೆ ಯಾವ ಸುದ್ದಿಯು ತಿಳಿಸಬೇಡಿ. ಮುಂದೆ ಚರ್ಚಿಸುವುದು ಏನೂ ಇಲ್ಲ" ಎಂದು ತಿಳಿಸಿದ್ದಾರೆ. ಉಮರ್ ಕುಟುಂಬದವರು ೧೫ ವರ್ಷಗಳಿಂದ ಬಾಡಿಗೆ ಕಟ್ಟಿಲ್ಲ ಎಂಬ ಆರೋಪದ ಮೇಲೆ ಅವರನ್ನು ಮನೆಯಿಂದ ಖಾಲಿ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.