ಪ್ರಧಾನ ಸುದ್ದಿ

ಬೆಂಗಳೂರಿನಲ್ಲಿ ನಾಲ್ವರು ಬೋಡೋ ಉಗ್ರರ ಬಂಧನ

Lingaraj Badiger

ಬೆಂಗಳೂರು: ಬೆಂಗಳೂರಿನಲ್ಲಿ ಮೂವರು ಬೋಡೋ ಉಗ್ರರನ್ನು ಶನಿವಾರ ಬಂಧಿಸಲಾಗಿದೆ.

ಇಂದು ಬೆಳಗ್ಗೆ ಬೆಂಗಳೂರು ಆಂತರಿಕ ಭದ್ರತಾ ದಳ ಹಾಗೂ ಅಸ್ಸಾಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಶ್ರೀಗಂಧಕಾವಲಿನಲ್ಲಿರುವ ಮನೆಯೊಂದರಲ್ಲಿ ಅಡಗಿದ್ದ ನಾಲ್ವರು
ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ತೋನಾರ್ ಬಸುಮತ್ರಿ, ನಸೀನ್ ಬಸುಮತ್ರಿ, ಸಂಧನ್ ಬಸುಮತ್ರಿ ಹಾಗೂ ಜಿಬಾಲ್ ನರ್ಸರಿ ಬಂಧಿತ ಉಗ್ರರು.

ಕರ್ನಾಟಕದಲ್ಲಿ ಇನ್ನೂ ಹಲವು ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ತಲೆಮರೆಸಿಕೊಂಡಿರುವ ಉಗ್ರರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

SCROLL FOR NEXT