ವಾಶಿಂಗ್ಟನ್: ಮಯನ್ಮಾರ್ ಭಯೋತ್ಪಾದಕರ ಮೇಲೆ ಭಾರತ ನಡೆಸಿದ ದಾಳಿಯ ಮೇಲೆ ಪ್ರತಿಕ್ರಿಯಿಸಲು ನಿರಾಕರಿಸಿರುವ ದೊಡ್ಡಣ್ಣ ಅಮೆರಿಕಾ, ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಉದ್ವಿಘ್ನತೆಯನ್ನು ತಿಳಿಗೊಳಿಸುವತ್ತ ಹಾಗು ಮಾತುಕತೆಯನ್ನು ಮತ್ತೆ ಮುಂದುವರೆಸುವತ್ತ ಗಮನಹರಿಸಲು ಎರಡು ದೇಶಗಳಿಗೆ ಸೂಚಿಸಿದೆ.
"ಯಾವುದೇ ನಿರ್ಧಿಷ್ಟ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ" ಎಂದು ಅಮೇರಿಕಾ ಸೆನೆಟ್ ಇಲಾಖೆಯ ವಕ್ತಾರ ಜೆಫ್ ರಾಥ್ಕೆ, ಭಾರತ ಗಡಿಯಿಂದಾಚೆಗೆ ನಡೆಸಿದ ಕಾರ್ಯಾಚರಣೆಗೆ ಅಮೆರಿಕಾ ಬೆಂಬಲ ಘೋಷಿಸುತ್ತದೆಯೇ ಅಥವಾ ಕಲವಳಗೊಂಡಿದೆಯೇ ಎಂಬ ವರದಿಗಾರರ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ್ದಾರೆ.
ಆದರೆ "ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಉದ್ವಿಘ್ನತೆಯನ್ನು ತಿಳಿಗೊಳಿಸುವತ್ತ ಹಾಗು ಮಾತುಕತೆಯನ್ನು ಮತ್ತೆ ಮುಂದುವರೆಸುವತ್ತ ಹೆಜ್ಜೆ ಇಡಲು ಉತ್ತೇಜಿಸುತ್ತೇವೆ" ಎಂದು ಅವರು ತಿಳಿಸಿದ್ದಾರೆ.
"ದಕ್ಷಿಣ ಏಶಿಯಾದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಅತಿ ಮುಖ್ಯ" ಎಂದು ಅವರು ಹೇಳಿದ್ದಾರೆ.