ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ 
ಪ್ರಧಾನ ಸುದ್ದಿ

ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಗೆ ಸುಷ್ಮಾ ಸಹಾಯ

ಐಪಿಎಲ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಲುಕೌಟ್ ನೋಟಿಸ್ ಪಡೆದಿರುವ ಲಲಿತ್ ಮೋದಿಗೆ ವೀಸಾ ಪಡೆಯುವ ನಿಟ್ಟಿನಲ್ಲಿ...

ನವದೆಹಲಿ: ಐಪಿಎಲ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಲುಕೌಟ್ ನೋಟಿಸ್ ಪಡೆದಿರುವ ಲಲಿತ್ ಮೋದಿಗೆ ವೀಸಾ ಪಡೆಯುವ ನಿಟ್ಟಿನಲ್ಲಿ ಸಹಾಯ ಮಾಡಿದ ಆರೋಪಕ್ಕೆ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಗುರಿಯಾಗಿದ್ದಾರೆ.

2014ರ ಜುಲೈ ತಿಂಗಳಿನಲ್ಲಿ ಲಲಿತ್ ಮೋದಿ ನನ್ನ ಜೊತೆ ಮಾತನಾಡಿ ಸಹಾಯ ಕೇಳಿದ್ದರು, ಪೋರ್ಚುಗಲ್ ನಲ್ಲಿ ಲಲಿತ್ ಮೋದಿ ಅವರ ಪತ್ನಿ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ಅವರಿಗೇ ಆಪರೇಷನ್ ಆಗುವುದಿತ್ತು. ಈ ಹಿನ್ನಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಲಲಿತ್ ಮೋದಿಗೆ ನಿಮ್ಮ ದೇಶದ ಕಾನೂನು ಅನುಮತಿ ನೀಡಿದರೆ ವೀಸಾ ನೀಡಲು ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದೆ ಎಂದು ಸುಷ್ಮಾ ಸ್ವರಾಜ್ ಅವರೇ ಟೀಟ್ ಮಾಡಿದ್ದಾರೆ.

ಯಾವುದೇ ವೈಯಕ್ತಿಕ ಕಾರಣಗಳಿಂದ ಲಲಿತ್ ಮೋದಿ ಅವರಿಗೆ ಸಹಾಯ ಮಾಡಿಲ್ಲ. ಮೋದಿ ವಿಚಾರದಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಲ್ಲ. ಕೇವಲ ಮಾನವೀಯ ನೆಲಗಟ್ಟಿನಲ್ಲಿ ಮಾಡಿರುವಂತಹ ಸಹಾಯವಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ಅಥವಾ ಹಣಕಾಸಿನ ವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಆರೋಪಕ್ಕೆ ಪುಷ್ಟಿಕರಿಸುವಂತಹ ಹಿನ್ನಲೆ ದಾಖಲೆಗಳು ಬಹಿರಂಗವಾಗಿವೆ. ಸುಷ್ಮಾ ಸ್ವರಾಜ್ ಪತಿ ಕುಶಾಲ್ ಸ್ವರಾಜ್ ಮತ್ತು ಲಲಿತ್ ಮೋದಿ ಅವರ ನಡುವೆ ನಡೆದಿರುವ ಇಮೇಲ್ ಸಂದೇಶಗಳು ಬಹಿರಂಗವಾಗಿವೆ.

ಈ ವಿಷಯ ಕುರಿತು ಕಾಂಗ್ರೆಸ್ ಹಾಗೂ ಬಿಜು ಜನತಾದಳ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿವೆ. ಸುಷ್ಮಾ ಸ್ವರಾಜ್ ಮೇಲಿರುವ ಆಪಾದನೆ ನಿಜವಾದರೆ. ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು, ಇಲ್ಲವಾದರೆ ಪ್ರಧಾನಿ ಮೋದಿ ಅವರೇ ಖುದ್ದಾಗಿ ರಾಜಿನಾಮೆ ಕೇಳಬೇಕು ಎಂದು ಒತ್ತಾಯಿಸಿವೆ.

ಬಿಜು ಜನತಾ ದಳದ ವಕ್ತಾರರು ಸುಷ್ಮಾ ಸ್ವರಾಜ್ ರಂತಹ ವ್ಯಕ್ತಿ ಕುರಿತು ಇಷ್ಟು ಬೇಗ ನಿರ್ಧಾರ ಕೈಗೊಳ್ಳುವುದು ತಪ್ಪು. ಒಂದು ವೇಳೆ ಅವರು ತಪ್ಪು ಮಾಡಿದ್ದೇ ಆದರೆ, ಆಗ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಬಿಜೆಪಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸುತ್ತಿದೆ ಎನ್ನಲಾಗುತ್ತಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್