ಪ್ರಧಾನ ಸುದ್ದಿ

ತಮಿಳುನಾಡು ಎಐಆರ್: ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟಿಸಿದ್ದಕ್ಕೆ ರೇಡಿಯೋ ಜಾಕಿ ಜೋಡಿ ವಜಾ

Guruprasad Narayana

ಧರ್ಮಪುರಿ: ಪ್ರಾದೇಶಿಕ ರೇಡಿಯೋ ಸ್ಟೇಶನ್ ೧೦೨.೫ ಎಫ್ ಎಂ ಕಾರ್ಯಕ್ರಮ ನಿಯೋಜಕನ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದಕ್ಕೆ ಅಖಿಲ ಭಾರತ ರೇಡಿಯೊದ (ಎಐಆರ್) ಇಬ್ಬರು ರೇಡಿಯೋ ಜಾಕಿಗಳು ತಮ್ಮ ತಾತ್ಕಾಲಿಕ ಉದ್ಯೋಗ ಕಳೆದುಕೊಂಡಿದ್ದಾರೆ. ಮಹಿಳೆಯೊಬ್ಬರು ನೀಡಿದ್ದ ದೂರನ್ನು ಆಂತರಿಕ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಏಪ್ರಿಲ್ ನಲ್ಲಿ ತನಿಖೆ ನಡೆಸಿತ್ತು. ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ಈ ಜೋಡಿ ಎಐಆರ್ ಪ್ರಾದೇಶಿಕ ನಿರ್ದೇಶಕರೂ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲು ಪ್ರಯತ್ನಿಸುತ್ತಿದ್ದರು ಸಾಧ್ಯವಾಗುತ್ತಿಲ್ಲ.

ಈ ಜೋಡಿ ತಪ್ಪು ವಿಳಾಸವನ್ನು ನೀಡಿರುವುದಕ್ಕೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎನ್ನುತ್ತಾರೆ ಕಾರ್ಯಕ್ರಮ ನಿರ್ದೇಶಕ ಮತ್ತು ವಿಕಲಾಂಗರಾಗಿರುವ ಆರ್ ಮುರಳಿ. ಕೆಲಸದ ವಾತಾವರಣದ ಬಗ್ಗೆ ದೂರಿದ್ದಕ್ಕೆ ತಮ್ಮನ್ನು ಕೂಡ ಕೆಲಸದಿಂದ ತೆಗೆದುಹಾಕಿದರು ಎಂದು ಮತ್ತೊಬ್ಬ ರೇಡಿಯೋ ಜಾಕಿ ಕೂಡ ದೂರಿದ್ದರೆ.

ನಿರ್ಮಲಾ(ಹೆಸರು ಬದಲಾಯಿಸಲಾಗಿದೆ) ಅವರ ಪ್ರಕಾರ ೨೦೦೧೪ರಲ್ಲಿ ಅವರು ಎಐಆರ್ ನ ರೈನ್ ಬೋ ಎಫ್ ಎಂ  ಚೆನ್ನೈ ಸೇರಿದ್ದರು. ಅವರು ಮದುವೆಯಾದ ನಂತರ ಧರ್ಮಪುರಿಗೆ ವರ್ಗಾಯಿಸಿಕೊಂಡಿದ್ದರು.

"ಮೊದಲಿನಿಂದಲೂ ಕಾರ್ಯಕ್ರಮ ನಿರ್ದೇಶಕ ಮುರಳಿ, ನನ್ನ ನೋಡಿ ಲೈಂಗಿಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದರು. ರಾತ್ರಿಯ ವೇಳೆ ಕರೆ ಮಾಡಲು ತಿಳಿಸುತ್ತಿದ್ದರು. ನಾನು ಅವರ ಜೊತೆ ಮಾತನಾಡುವುದನ್ನೇ ಬಿಟ್ಟು, ಇಲ್ಲೇ ಕೆಲಸ ಮಾಡುವ ನನ್ನ ಪತಿಗೆ ತಿಳಿಸಿದೆ" ಎನ್ನುತ್ತಾರೆ ನಿರ್ಮಲಾ.

"ಫೆಬ್ರವರಿಯಲ್ಲಿ ಅವರ ಜೊತೆ ಸಹಕರಿಸದೆ ಹೋದರೆ ಕೆಲಸದಿಂದ ಕಿತ್ತು ಹಾಕುವುದಾಗಿ ಬೆದರಿಸಿದರು. ಆದುದರಿಂದ ನಾನು ಮತ್ತು ನನ್ನ ಪತಿ ಎಐಆರ್ ಹೆಚ್ಚುವರಿ ನಿರ್ದೇಶಾಕ ಮತ್ತು ಆಂತರಿಕ ಲೈಂಗಿಕ ದೌರ್ಜನ್ಯ ತಡೆ ಸಮಿತಿಯಲ್ಲಿ ದೂರು ಸಲ್ಲಿಸಿದೆವು" ಎಂದು ತಿಳಿಸಿದ್ದಾರೆ.

"ಮುರಳಿ ವಿರುದ್ಧದ ನಮ್ಮ ದೂರಿನ ನಂತರ ತನಿಖೆ ನಡೆಸಲಾಯಿತು. ಮುರಳಿ ತಮ್ಮ ವಿಕಲಾಂಗತೆಯನ್ನು ಮುಂದು ಮಾಡಿ ಅನುಕಂಪ ಗಳಿಸಿಕೊಂಡರು. ಬದಲಿಗೆ ನಾವು ಕೆಲಸ ಕಳೆದುಕೊಂಡೆವು" ಎನ್ನುತ್ತಾರೆ ನಿರ್ಮಲಾ.

"ನಮ್ಮದು ಅಂತರ್ಜಾತೀಯ ವಿವಾಹ ಆಗಿರುವುದರಿಂದ ನಮ್ಮ ಕುಟುಂಬಗಳು ನಮಗೆ ಬೆಂಬಲ ನೀಡುತ್ತಿಲ್ಲ. ಹಾಗು ಇದೇ ವಿಷಯವನ್ನು ಮುಂದಿಟ್ಟುಕೊಂಡು ನನ್ನ ಹೆಂಡತಿಯನ್ನು ದುರುಪಯೋಗಪಡಿಸಲು ಮುರಳಿ ಪ್ರಯತ್ನಿಸಿದರು" ಎಂದು ನಿರ್ಮಲಾ ಅವರ ಪತಿ ದೂರಿದ್ದಾರೆ.

SCROLL FOR NEXT