ಪ್ರಧಾನ ಸುದ್ದಿ

ಅಮೆರಿಕಾಕ್ಕೆ ಮರಣ ಪ್ರಮಾಣಪತ್ರ ಕೇಳಿದ್ದ ಬಿನ್ ಲ್ಯಾಡನ್ ಪುತ್ರ: ವಿಕಿಲೀಕ್ಸ್

Guruprasad Narayana

ರಿಯಾಧ್: ಅಮೆರಿಕಾದ 'ನೇವಿ ಸೀಲ್ಸ್' ಆಲ್-ಕೈದಾ ಮುಖಂಡ ಬಿನ್ ಲ್ಯಾಡನ್ ನನ್ನು ಹತ್ಯೆಮಾಡಿದ ನಂತರ ಲ್ಯಾಡೆನ್ ಮಗ ತಂದೆಯ ಸಾವಿನ ಪ್ರಮಾಣಪತ್ರವನ್ನು ಕೋರಿ ಪತ್ರ ಬರೆದಿದ್ದ ಎಂದು ವಿಕಿಲೀಕ್ಸ್ ವರದಿ ಮಾಡಿದೆ.

'ಸೌದಿ ಕೇಬಲ್ಸ್' ಎಂದು ಕರೆಯಲಾಗಿರುವ ರಿಯಾಧ್ ನ ಅಮೇರಿಕಾ ರಾಯಭಾರಿ ಕಚೇರಿಯ ೭೦೦೦೦ ದಾಖಲೆಗಳನ್ನು ಈ ಸುದ್ದಿ ಬಯಲಿಗೆಳೆಯುವ ಅಂತರ್ಜಾಲ ಬಿಡುಗಡೆ ಮಾಡಿದ್ದು ಅದರಲ್ಲಿ ಈ ಪತ್ರ ಕೂಡ ಒಳಗೊಂಡಿದೆ.

ಇನ್ನು ಹೆಚ್ಚಿನ ದಾಖಲೆಗಳು ಬಿಡುಗಡೆಗೆ ಕಾಯುತ್ತಿವೆ ಎಂದು ವಿಕಿಲೀಕ್ಸ್ ಹೇಳಿಕೊಂಡಿದೆ.

"ನಿಮ್ಮ ತಂದೆಯ ಸಾವಿನ ಪ್ರಮಾಣ ಪತ್ರ ಕೋರಿ ಬರೆದಿರುವ ಪತ್ರ ತಲುಪಿದೆ" ಎಂದು ಅಮೇರಿಕಾ ರಾಯಭಾರಿ ಕಚೇರಿ ಅಧಿಕಾರಿ ಗ್ಲೆನ್ ಕೈಸರ್, ಅಬ್ದುಲ್ಲ ಬಿನ್ ಲ್ಯಾಡನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸೇನಾ ಕಾರ್ಯಾಚರಣೆಗಳಲ್ಲಿ ಮೃತಗೊಂಡವರಿಗೆ ಮರಣ ಪ್ರಮಾಣ ಪತ್ರವನ್ನು ನೀಡಲಾಗುವುದಿಲ್ಲ ಎಂದು ಅಮೇರಿಕಾ ಸರ್ಕಾರದ ಅಧಿಕಾರಿಗಳು ನಂತರ ತಿಳಿಸಿದ್ದಾರೆ.

ಬದಲಾಗಿ ಅಮೇರಿಕಾ ಕೋರ್ಟ್ ಗೆ ಬಿನ್ ಲ್ಯಡನ್ ಮೃತ ಪಟ್ಟಿರುವ ದಾಖಲೆಗಳನ್ನು ಒದಗಿಸಿ ಅವನ ವಿರುದ್ಧ ಇದ್ದ ಕ್ರಿಮಿನಲ್ ಅಪರಾಧಗಳನ್ನು ಕೈಬಿಟ್ಟಿರುವ ದಾಖಲೆಗಳನ್ನು ಅಬ್ದುಲ್ಲಾ ಅವರಿಗೆ ಕೈಸರ್ ಒದಗಿಸಿದ್ದಾರೆ. "ಈ ದಾಖಲೆಗಳು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಸಹಕಾರಿಯಾಗಲಿವೆ ಎಂದು ನಂಬಿದ್ದೇನೆ" ಎಂದು ಕೈಸರ್ ಬರೆದಿದ್ದಾರೆ.

ಬಿ ಲ್ಯಾಡೆನ್ ಕುಟುಂಬ ಸೌದಿಯಲ್ಲಿ ಅತಿ ದೊಡ್ಡ ಉದ್ದಿಮೆಯನ್ನು ಹೊಂದಿದೆ. ಆದರೆ ಸೌದಿ ೧೯೯೪ರಲ್ಲಿ ಒಸಾಮಾ ಬಿನ್ ಲ್ಯಾಡೆನ್ ಗೆ ನಾಗರಿಕ ಸ್ಥಾನವನ್ನು ವಜಾ ಮಾಡಿತ್ತು.

SCROLL FOR NEXT