ಮಕ್ಸ್ತರ್ (ಪಂಜಾಬ್): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ರೈತರ ಕಾಳಜಿ 'ರಾಜಕೀಯ ತಂತ್ರ'ವಲ್ಲದೆ ಬೇರೇನಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಸೋಮವಾರ ಟೀಕಿಸಿದ್ದಾರೆ.
"ಕಾಂಗ್ರೆಸ್ ಪಕ್ಷದ ದೀರ್ಘ ದುರಾಡಳಿತ ರೈತರ ಬೆನ್ನು ಮೂಳೆ ಮುರಿದಿದೆ" ಎಂದು ಮುಕ್ಸ್ತರ್ ನಲ್ಲಿ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಕಾಂಗ್ರೆಸ್ ನ ರೈತ ವಿರೋಧಿ ಹಾಗು ಹಿಮ್ಮುಖ ನೀತಿಗಳು ದೇಶದ ರೈತರನ್ನು ಹಾಳುಗೆಡವಿದ್ದಲ್ಲದೆ ಅವರನು ಸಾಲದ ಸುಳಿಗೆ ಸಿಕ್ಕಿಸಿವೆ ಎಂದು ಅವರು ಟೀಕಿಸಿದ್ದಾರೆ.
ಜೂನ್ ೧೦ ರಂದು ಪಂಜಾಬಿನ ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ರಾಹುಲ್ ಗಾಂಧಿ ರೈತನ ಕುಟುಂಬವನ್ನು ಭೇಟಿ ಮಾಡಿದ ನಾಲ್ಕು ದಿನಗಳ ನಂತರ ಬಾದಲ್ ಟೀಕಾಪ್ರಹಾರ ಮಾಡಿದ್ದಾರೆ.