ಪಾಕಿಸ್ತಾನಕ್ಕೆ ಮೋದಿ ರಂಜಾನ್ ದೂರವಾಣಿ ಕರೆ ವಿರೋಧಿಸಿ ಭಿತ್ತಿಚಿತ್ರಗಳು 
ಪ್ರಧಾನ ಸುದ್ದಿ

ಪಾಕಿಸ್ತಾನಕ್ಕೆ ಮೋದಿ ರಂಜಾನ್ ದೂರವಾಣಿ ಕರೆ ವಿರೋಧಿಸಿ ಭಿತ್ತಿಚಿತ್ರಗಳು

ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರಧಾನಿಗಳಿಗೆ ರಂಜಾನ್ ಶುಭ ಕೋರಲು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿದ್ದನ್ನು ವಿರೋಧಿಸಿ ಮಾಜಿ ಬಿಜೆಪಿ ಪ್ರಧಾನ

ನವದೆಹಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರಧಾನಿಗಳಿಗೆ ರಂಜಾನ್ ಶುಭ ಕೋರಲು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿದ್ದನ್ನು ವಿರೋಧಿಸಿ ಮಾಜಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜಯ್ ಜೋಷಿಯವರ ಫೋಟೋ ಇರುವ ಭಿತ್ತಿಚಿತ್ರಗಳನ್ನು ಮಂಗಳವಾರ ಹಲವು ಬಿಜೆಪಿ ಮುಖಂಡರ ಮನೆಗಳ ಹೊರಗೆ ರಾರಾಜಿಸುತ್ತಿವೆ.

ಪಕ್ಷದ ಹೆಸರು ಹಾಳುಮಾಡುವಂತಹ ಪೋಸ್ಟರ್ ಗಳನ್ನು ಹಾಕದಂತೆ ಜೋಶಿ ಅವರು ಕಳೆದ ತಿಂಗಳು ಮನವಿ ಮಾಡಿದ್ದರು ಕೂಡ ಕೇಂದ್ರ ದೆಹಲಿಯ ಹಲವು ಭಾಗಗಳಲ್ಲಿ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಈ ಪೋಸ್ಟರ್ ಗಳಲ್ಲಿ ನರೇಂದ್ರ ಮೋದಿ ಅಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಫೋಟೊಗಳನ್ನು ಪ್ರದರ್ಶಿಸಿದ್ದರು ಅವರ ಹೆಸರುಗಳನ್ನೂ ನಮೂದಿಸಿಲ್ಲ.

ಅಮಿತ್ ಷಾ, ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖ್ಯ ಕಛೇರಿಗಳ ಹೊರಗೆ ಈ ಭಿತ್ತಿಚಿತ್ರಗಳನ್ನು ಹಾಕಲಾಗಿದೆ.

"ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ರಂಜಾನ್ ಹಬ್ಬಕ್ಕೆ ಶುಭಾಷಯ ಕೋರುತ್ತೀರಿ ಆದರೆ ಸುಷ್ಮಾ, ಅಡ್ವಾಣಿ, ಸಂಜಯ್ ಜೋಷಿ. ರಾಜನಾಥ್, ಗಡ್ಕರಿ, ಮುರಳಿ ಮನೋಹರ್ ಜೋಷಿ, ವಸುಂಧರಾ ರಾಜೆ ವಿರುದ್ಧ ಕೆಟ್ಟದಾಗಿ ನಡೆದುಕೊಳ್ಳುತ್ತೀರಿ.

"ಸಂವಾದ ಇಲ್ಲ, ಮನದ ಮಾತೂ ಇಲ್ಲ, ಎಲ್ಲರ ಒಟ್ಟಿಗೂ ಇಲ್ಲ, ಎಲ್ಲರ ವಿಕಾಸವೂ ಇಲ್ಲ ಆದರೆ ಜನ ನಿಮ್ಮನ್ನು ಏಕೆ ನಂಬಬೇಕು" ಎಂದು ಪೋಸ್ಟರ್ ಗಳ ಮೇಲೆ ಬರೆಯಲಾಗಿದೆ.

ತಾವಿನ್ನೂ ಸಕ್ರಿಯ ಬಿಜೆಪಿ ಕಾರ್ಯಕರ್ತ ಮತ್ತು ನರೇಂದ್ರ ಮೋದಿ ತಮ್ಮ ನಾಯಕ ಎಂದು ಹೇಳಿಕೊಂಡು ಜೋಶಿ ಅವರು, ಪಕ್ಷಕ್ಕೆ ಮಸಿ ಬಳಿಯುವ ಯಾವುದೇ ಪೋಸ್ಟರ್ ಗಳನ್ನು ಹಾಕದಂತೆ ತಮ್ಮ ಬೆಂಬಲಿಗರಿಗೆ ಮೇ ೨೧ರಂದು ಮನವಿ ಮಾಡಿದ್ದರು. ೨೦೦೫ರಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಸಂಜಯ್ ಜೋಶಿಯವರನ್ನು ಬಿಜೆಪಿ ಪಕ್ಷದಿಂದ ವಜಾ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!