ಪ್ರಧಾನ ಸುದ್ದಿ

ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸಿಮೆಂಟ್ ತುಂಬಿದ ಹಡಗು; ೧೪ ಜನರ ರಕ್ಷಣೆ

Guruprasad Narayana

ಮುಂಬೈ: ವೈಪರೀತ್ಯ ಹವಾಮಾನದಿಂದ ಗುಜರಾತ್ ನ ತೀರದಿಂದ ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸಿಮೆಂಟ್ ಕೊಂಡೊಯ್ಯುತ್ತಿದ್ದ ಹಡಗಿನ ೧೪ ಜನ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂ ವಿ ಕೋಸ್ತಲ್ ಪ್ರೈಡ್ ಹಡಗು ಮಹಾರಾಷ್ಟ್ರದ ದಹನು ಇಂದ ಪಶ್ಚಿಮಕ್ಕೆ ೨೫ ಕಿಮೀ ದೂರ ಕ್ರಮಿಸಿದ್ದಾಗ ಎಂಜಿನ್ ನಿಷ್ಫಲವಾಗಿದ್ದರಿಂದ ಮಂಗಳವಾರ ಸಂಜೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದೆ.

ಭಾರತೀಯ ನೌಕಾದಳ ಮತ್ತು ಭಾರತೀಯ ಬಂದರು ಪಡೆ ರಕ್ಷಣೆಗೆ ತಕ್ಷಣ ಹಡಗು ಕಳುಹಿಸಿ ಮುಳುಗಿದ್ದ ಹಡಗನ್ನು ಎಳೆದುತರುವ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಆದರೆ ಬುಧವಾರ ಬೆಳಗ್ಗೆ ಸುಮಾರು ೮:೪೦ ಕ್ಕೆ ಹಡಗು ಮುಂಬೈ ನ ಉತ್ತರಕ್ಕೆ ೭೫ ನಾಟಿಕಲ್ ಮೈಲುಗಳ ದೂರದಲ್ಲಿ ಮುಳುಗಿದೆ.

ಐ ಎನ್ ಎಸ್ ಶಿಕ್ರಾ ಮತ್ತು ಐ ಎನ್ ಎಸ್ ಕೊಳಬಾ ಹಡುಗಗಳನ್ನು ಬಳಸಿ ಭಾರತೀಯ ನೌಕಾದಳ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿ ೧೪ ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT