ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಿಜೆಪಿ ಸಂಸದ ದಿಲೀಪ್ ಸಿಂಗ್ ಭುರಿಯಾ ಸಾವಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಬಿಜೆಪಿ ಸಂಸದ ದಿಲೀಪ್ ಸಿಂಗ್ ಭುರಿಯಾ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಷಾದ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ದಿವಂಗತ ಬಿಜೆಪಿ ಸಂಸದ ದಿಲೀಪ್ ಸಿಂಗ್ ಭುರಿಯಾ
Guruprasad Narayana
Updated On : 24 Jun 2015, 7:10 am

ನವದೆಹಲಿ: ಬಿಜೆಪಿ ಸಂಸದ ದಿಲೀಪ್ ಸಿಂಗ್ ಭುರಿಯಾ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಷಾದ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

"ಶ್ರೀ ದಿಲೀಪ್ ಸಿಂಗ್ ಭುರಿಯಾ ಅವರ ಸಾವಿನಿಂದ, ಬುಡಕಟ್ಟು ಸಮುದಾಯಕ್ಕೆ ಅಪಾರ ಸೇವೆ ಸಲ್ಲಿಸಿದ ಧೀಮಂತ ರಾಜಕೀಯ ನಾಯಕನೊಬ್ಬನನ್ನು ಕಳೆದುಕೊಂಡಿದ್ದೇವೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

"ಶ್ರೀ ಭುರಿಯಾ ಅವರಿಗೆ ಮಧ್ಯ ಪ್ರದೇಶದಲ್ಲೂ ಮತ್ತು ರಾಷ್ಟ್ರೀಯ ಮಟ್ಟದಲ್ಲೂ ಅಪಾರವಾದ ರಾಜಕೀಯ ಅನುಭವವಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದ ಸದಸ್ಯರೊಂದಿಗೆ ನಾನು ಪ್ರಾರ್ಥಿಸುತ್ತೇನೆ" ಎಂದು ಕೂಡ ಬರೆದಿದ್ದಾರೆ.

ಮಧ್ಯ ಪ್ರದೇಶದ ರತ್ಲಂ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಭುರಿಯಾ ಕೆಲ ಕಾಲದಿಂದ ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಅವರಿಗೆ ೭೧ ವರ್ಷ ವಯಸ್ಸಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement