ಕೋಲ್ಕತ್ತ: ಐದು ಮಕ್ಕಳ ತಾಯಿಯೊಬ್ಬಳು ನರಭಕ್ಷಕಿ ಎಂದು ದೂರಲಾಗಿದ್ದು, ಇದು ತಿಳಿದ ಒಂದು ದಿನದ ನಂತರ ಶುಕ್ರವಾರ ಕೋಲ್ಕತ್ತಾದ ಮನೋರೋಗ ಚಿಕಿತ್ಸಾಲಯಕ್ಕೆ ದಾಖಲು ಮಾಡಲಾಗಿದೆ.
ಈ ಭಯಾನಕ ಘಟನೆ ನಡೆದಿರುವುದು ಮಾಲ್ಡಾ ಜಿಲ್ಲೆಯ ಗೋಪಾಲಪುರ ಗ್ರಾಮದಲ್ಲಿ. ಗುರುವಾರ ಪ್ರಮೀಳಾ ಮೊಂಡಲ್(೪೨) ಎಂಬ ಮಹಿಳೆ ತಮ್ಮ ಮಗಳ ತಲೆಯ ಚರ್ಮವನ್ನು ಕತ್ತರಿಸಿ ತಿನ್ನುತ್ತಿದ್ದನ್ನು ಅವಳ ಸಂಬಂಧಿಯೊಬ್ಬನು ನೋಡಿದ್ದಾನೆ. ಮಗು ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದರಿಂದ ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲು ಮಾಡಲಾಗಿದೆ.
"ಪರಿಮಳಾದ್ದು ನನ್ನ ಪಕ್ಕದ ಮನೆ. ನನ್ನ ಗಂಡ ಅವರ ಮನೆಯೊಳಗೆ ಹೋದಾಗ ಮಗು ಭಾರತಿ ಕೂಗಾಡುತ್ತಿದ್ದನ್ನು ಕೇಳಿಸಿಕೊಂಡಿದ್ದಾರೆ. ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಮಗಳ ತಲೆಯನ್ನೇ ಕಿತ್ತು ತಿನ್ನುತ್ತಿದ್ದ ಭಯಾನಕ ದೃಶ್ಯ ಕಂಡು ಆಘಾತವಾಗಿದೆ. ಅವಳ ಮಗ ರೂಮಿನಲ್ಲಿ ಮಲಗಿದ್ದ" ಎಂದು ಪರಿಮಳಾ ಅವರ ಸಂಬಂಧಿ ಫಲ್ಗುಣಿ ತಿಳಿಸಿದ್ದಾರೆ.
ಒಂದು ವರ್ಷದ ಹಿಂದೆ ನೌಕರಿ ಹುಡುಕಲು ಹೋಗಿದ್ದ ಪರಿಮಳಾ ಗಂಡ ಇಲ್ಲಿಯವರೆಗೂ ಹಿಂದಿರುಗಿ ಬಂದಿಲ್ಲ ಎಂದು ತಿಳಿದುಬಂದಿದೆ.
ಗ್ರಾಮಸ್ಥರು ಮಹಿಳೆಯನ್ನು ಥಳಿಸಿದ್ದು, ಮಹಿಳೆ ನರಭಕ್ಷಕಿ ಎಂದು ಒಪ್ಪಿಕೊಂಡಿದ್ದಾಳೆ. ಆದರೆ ಅದಕ್ಕೆ ಕಾರಣ ನೀಡಿಲ್ಲ. ಈ ಮಹಿಳೆ ಡ್ರಗ್ ಮತ್ತು ಮಧ್ಯಪಾನ ವ್ಯಸನಿ. ಅಮಲಿನಲ್ಲಿ ಹೀಗೆ ಮಾಡಿರಬಹುದು ಎಂಬುದು ಗ್ರಾಮಸ್ಥರ ವಾದ.
ತನ್ನ ಮಕ್ಕಳಿಗೆ ಪರಿಮಳಾ ಕಿರುಕುಳ ಕೊಟ್ಟಿರುವುದು ಇದೇ ಮೊದಲಲ್ಲವಂತೆ. "ಈ ಹಿಂದೆ ಕೂಡ ಅವಳ ೮ ವರ್ಷದ ಮಗಳು ಪ್ರತಿಭಾಳಿಗೆ ಬೆಂಕಿ ಹಚ್ಚಿದ್ದಳಂತೆ. ಅಂದಿನಿಂದ ಆ ಮಗು ತನ್ನ ಚಿಕ್ಕಪ್ಪನ ಜೊತೆ ಬದುಕುತ್ತಿದ್ದಾಳೆ" ಎಂದು ತಿಳಿಸುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಸೊನೇಕಾ ಮೊಂಡಲ್.
ಜನರ ಗುಂಪಿನಿಂದ ಮಹಿಳೆಯನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಮಹಿಳೆಯನ್ನು ಪರೀಕ್ಷಿಸಿರುವ ವೈದ್ಯರು, ಮಹಿಳೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು ಮಾನಸಿಕ ಚಿಕಿತ್ಸೆ ಅಗತ್ಯ ಎಂದಿದ್ದಾರೆ.