ಮುಖ್ಯಮಂತ್ರಿ ಸಿದ್ದರಾಮಯ್ಯ 
ಪ್ರಧಾನ ಸುದ್ದಿ

ಲೋಕಾಯುಕ್ತ ಲಂಚ ಪ್ರಕರಣ: ಸಿಬಿಐಗೆ ವಹಿಸುವ ಅಧಿಕಾರ ನಮಗಿಲ್ಲ ಎಂದ ಸಿದ್ದರಾಮಯ್ಯ

ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳೇ ಭಾಗಿಯಾಗಿರುವ ರು.1 ಕೋಟಿ ಲಂಚ ಆರೋಪದ ತನಿಖೆ ಮತ್ತೆ ಕಗ್ಗಂಟಾಗಿ ಪರಿಣಮಿಸಿದೆ. ಯಾರು ತನಿಖೆ ನಡೆಸಬೇಕೆಂಬುದನ್ನು ಅಂತಿಮವಾಗಿ ಸರ್ಕಾರವೇ ನಿರ್ಧರಿಸಲಿ ಎಂದು ಲೋಕಾಯುಕ್ತರು...

ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳೇ ಭಾಗಿಯಾಗಿರುವ ರು.1 ಕೋಟಿ ಲಂಚ ಆರೋಪದ ತನಿಖೆ ಮತ್ತೆ ಕಗ್ಗಂಟಾಗಿ ಪರಿಣಮಿಸಿದೆ. ಯಾರು ತನಿಖೆ ನಡೆಸಬೇಕೆಂಬುದನ್ನು ಅಂತಿಮವಾಗಿ ಸರ್ಕಾರವೇ ನಿರ್ಧರಿಸಲಿ ಎಂದು ಲೋಕಾಯುಕ್ತರು ಪತ್ರ ಬರೆಯುವ ಮೂಲಕ ಕೈತೊಳೆದುಕೊಂಡಿದ್ದಾರೆ. ಹಾಗಾಗಿ ಈಗ ಚೆಂಡು ಸರ್ಕಾರದ ಅಂಗಳಕ್ಕೆ ಬಿದ್ದಿದೆ.

ಈ ಮಧ್ಯೆ ಲೋಕಾಯುಕ್ತ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದು ನಮ್ಮ ವ್ಯಾಪ್ತಿಯಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುವ ಮೂಲಕ ತನಿಖಾ ಸಂಸ್ಥೆ ಕುರಿತು ಅನಿಶ್ಚಿತತೆ ಮೂಡಿದೆ. ಪ್ರಕರಣವನ್ನು ಸಿಸಿಬಿಗೆ ಒಪ್ಪಿಸಿದ್ದರ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿರುವುದು ಹಾಗೂ ತನಿಖೆಗೆ ಸಿಸಿಬಿ ನಿರಾಕರಿಸಿದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಈಗ ಸರ್ಕಾರದ ಕಡೆ ಬೊಟ್ಟು ತೋರಿಸಿದ್ದಾರೆ.

ಲೋಕಾಯುಕ್ತರ ಪತ್ರ
:
ಲಂಚ ಆರೋಪದ ಪ್ರಕರಣವನ್ನು `ಸ್ವತಂತ್ರ ತನಿಖಾ ಸಂಸ್ಥೆ'ಗೆ ವಹಿಸುವಂತೆ ಕೋರಿ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರು ರಾಜ್ಯ ಸರ್ಕಾರಕ್ಕೆ ಭಾನುವಾರ ಪತ್ರ ಬರೆದಿದ್ದಾರೆ. ಲೋಕಾಯುಕ್ತ ಸಂಸ್ಥೆಯ ಘನತೆ, ಗೌರವ ಎತ್ತಿ ಹಿಡಿಯುವ ಉದ್ದೇಶದಿಂದ ಪಾರದರ್ಶಕ ಹಾಗೂ ಪ್ರಭಾವರಹಿತ ತನಿಖೆಯಾಗಬೇಕು ಎನ್ನುವ ಕಾರಣಕ್ಕೆ ಆರೋಪದ ಬಗೆಗಿನ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ನೀಡಬೇಕೆಂಬುದು ಲೋಕಾಯುಕ್ತರ ಬಯಕೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಲೋಕಾಯುಕ್ತ ರಿಜಿಸ್ಟ್ರಾರ್ ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಶುಕ್ರವಾರವಷ್ಟೇ (ಜೂ.26) ಲೋಕಾಯುಕ್ತರು ಸಿಸಿಬಿ ಜಂಟಿ ಆಯುಕ್ತ ಚಂದ್ರಶೇಖರ್ ಅವರಿಗೆ ವಹಿಸಿದ್ದರು. ಆದರೆ, ಶನಿವಾರ ಲೋಕಾಯುಕ್ತರಿಗೆ ಪತ್ರ ಬರೆದ ಚಂದ್ರಶೇಖರ್, ತಮ್ಮ ಮಾವ ರಾಮಾಂಜನೇಯ ಅವರ ವಿರುದಟಛಿ ಭ್ರಷ್ಟಾಚಾರ ಆರೋಪದ ಬಗ್ಗೆ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ, ನೀವು ನೀಡಿರುವ ನಿರ್ದೇಶನವನ್ನು ಮರುಪರಿಶೀಲನೆ ನಡೆಸಿ ಎಂದು ಕೋರಿದ್ದರು.

ಚಂದ್ರಶೇಖರ್ ಪತ್ರದ ಹಿನ್ನೆಲೆಯಲ್ಲಿ ಲೋಕಾಯುಕ್ತರು, ಪ್ರಕರಣ ತನಿಖೆಗಾಗಿ ಜಂಟಿ ಆಯುಕ್ತ ಚಂದ್ರಶೇಖರ್ ಅವರಿಗೆ ನೀಡಿದ್ದ ಜವಾಬ್ದಾರಿಯನ್ನು ಹಿಂತೆಗೆದುಕೊಂಡಿದ್ದಾರೆ. ಇದೇ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರಿಗೆ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರು ಜೂ. 23ರಂದು ಆದೇಶಿಸಿದ್ದರು.

ಇವರೆಲ್ಲರ ಅರ್ಜಿಗಳ ವಿಚಾರಣೆ ವೇಳೆ ಲೋಕಾಯುಕ್ತ ಸಂಸ್ಥೆ ಪರ ವಕೀಲರಾದ ವೆಂಕಟೇಶ್ ಪಿ. ದಳವಾಯಿ ಹಾಗೂ ಪುಷ್ಪಲತಾ, ಎರಡು ದಿನಕ್ಕಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಸರ್ಕಾರಿ ನೌಕರರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಬಲವಾಗಿ ವಾದಿಸಿದರು.

ವಕೀಲರ ವಾದವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಲಂಚ ಪ್ರಕರಣದಲ್ಲಿ ಎರಡು ದಿನ ಮೀರಿ ಜೈಲುವಾಸ ಅನುಭವಿಸಿದ ಸರ್ಕಾರಿ ನೌಕರರನ್ನು ಸೇವೆಯಿಂದ ಅಮಾನತು ಮಾಡಲು ಸರ್ಕಾರಕ್ಕೆ ನಿರ್ದೇಶಿಸಿದೆ. ಕಳೆದ ಎರಡು ತಿಂಗಳಲ್ಲಿ ಲಂಚ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ ಅನೇಕ ಸರ್ಕಾರಿ ನೌಕರರು ಸಲ್ಲಿಸಿದ್ದ ಜಾಮೀನು ಅರ್ಜಿ ಆದೇಶದಲ್ಲಿ ಹೈಕೋರ್ಟ್ ಈ ವಿಚಾರವನ್ನು ಸ್ಪಷ್ಟವಾಗಿ ಉಲ್ಲೇಖಿಸಿಯೇ ಜಾಮೀನು ನೀಡುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಪರ ಅಭಿಯೋಜಕರಾದ ವೆಂಕಟೇಶ್ ಪಿ. ದಳವಾಯಿ, `ಲಂಚ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ ನೌಕರರನ್ನು ಅಮಾನತು ಮಾಡದೇ ಹೋದಲ್ಲಿ, ಜಾಮೀನು ಪಡೆದ ನಂತರ ಆ ನೌಕರ ಮತ್ತೆ ತನ್ನ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಆಗ ತಮ್ಮ ಅಧಿಕಾರ ದುರ್ಬಳಕೆ ಮಾಡಿ ಪ್ರಕರಣದ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಅಥವಾ ತಿರುಚಲು ಯತ್ನಿಸಬಹುದು' ಎನ್ನುತ್ತಾರೆ.

ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ, ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾದ ಹಾಗೂ ಆಗಬಹುದಾದ ಸರ್ಕಾರಿ ನೌಕರರು ಇನ್ನು ಮುಂದೆ ದೀರ್ಘಕಾಲದ ಅಮಾನತಿಗೆ ಸಿದ್ಧರಿರಬೇಕಾಗುತ್ತದೆ. ಆದರೆ, ಜೂ.26ರಂದು ಸುದ್ದಿಗೊಷ್ಠಿ ನಡೆಸಿದ ನ್ಯಾ. ಭಾಸ್ಕರ್‍ರಾವ್, ಪ್ರಕರಣದ ತನಿಖೆಯನ್ನು ಸೋನಿಯಾ
ನಾರಂಗ್ ಬದಲು, ಸಿಸಿಬಿಗೆ ವಹಿಸಿದ್ದರು.

ವಿವಾದ ತಂದ ತನಿಖೆ:

ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತ ನಡುವಿನ ಕಲಹ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಲೋಕಾಯುಕ್ತ ಸಂಸ್ಥೆ ತೀವ್ರ ವಿವಾದದಲ್ಲಿದೆ. ಅದರಲ್ಲೂ ಜಿಲ್ಲಾ ಪಂಚಾಯತ್ ಎಂಜಿನಿಯರ್ ಕೃಷ್ಣಮೂರ್ತಿ ಎಂಬುವರಿಗೆ ಲೋಕಾಯುಕ್ತ ಸಂಸ್ಥೆಯಲ್ಲಿದ್ದುಕೊಂಡು ರು.1 ಕೋಟಿ ಲಂಚ ಕೇಳಿಕ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರ ಸಮೀಪದ ವ್ಯಕ್ತಿ ಭಾಗಿಯಾಗಿರುವ ಆರೋಪದಿಂದಾಗಿ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಅತ್ಯಂತ ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ ಒಂದು ವೇಳೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡದೇ ಮತ್ತೆ ಪ್ರಕರಣವನ್ನು ಲೋಕಾಯುಕ್ತರ ವಿವೇಚನಗೆ ಬಿಟ್ಟರೆ ಆಗ.ನ್ಯಾ.ಭಾಸ್ಕರ್ ರಾವ್ ಅವರ ನಡೆ ಏನು? ಎಂಬುದು ಮತ್ತೊಂದು ಕುತೂಹಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT