ಹರಿದ್ವಾರ: ಜನವರಿ ೨೦೧೬ರಿಂದ ಪ್ರಾರಂಭವಾಗಲಿರುವ 'ಅರ್ಧ ಕುಂಭಮೇಳ'ಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ.
ದೇಶದ ವಿವಿಧ ಪವಿತ್ರ ಕ್ಷೇತ್ರಗಳಲ್ಲಿ ಆರು ವರ್ಷಕ್ಕೊಮ್ಮೆ ಈ ಹಿಂದು ಧರ್ಮದ ಸಭಾ ಹಬ್ಬವನ್ನು ಹಮ್ಮಿಕೊಳ್ಳಲಾಗುತ್ತದೆ.
ಇದರ ಮೊದಲ ಅಂಗವಾಗಿ ಜನವರಿ ೧೪ರ ಮಕರ ಸಂಕ್ರಾಂತಿಯ ದಿನದಂದು ಶಾಹಿ ಸ್ನಾನ (ರಾಜ ಸ್ನಾನ) ನಡೆಯಲಿದ್ದು ಅದರಲ್ಲಿ ಎಲ್ಲ ಅಖಾಡಗಳು ಭಾಗವಹಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರ ನಂತರ ಸರಣಿ ಸ್ನಾನಗಳು ಫೆಬ್ರವರಿ ೮(ಮೌನಿ ಅಮಾವಾಸ್ಯೆ), ಫೆಬ್ರವರಿ ೧೨ (ವಸಂತ ಪಂಚಮಿ), ಫೆಬ್ರವರಿ ೨೨(ಮಾಘ ಪೂರ್ಣಿಮ), ಮಾರ್ಚ್ ೮ (ಮಹಾ ಶಿವರಾತ್ರಿ), ಏಪ್ರಿಲ್ ೭ (ಸೋಮವತಿ ಅಮಾವಾಸ್ಯೆ), ಏಪ್ರಿಲ್ ೧೫ (ರಾಮ ನವಮಿ), ಏಪ್ರಿಲ್ ೨೨ (ಚೈತ್ರ ಪೂರ್ಣಿಮ) ಮತ್ತು ಮೇ ೬ (ಕೃಷ್ಣ ಪಕ್ಷ ಅಮಾವಾಸ್ಯೆ) ಗಳಂದು ನಡೆಯಲಿವೆ.
ಅರ್ಧಕುಂಭ ಮೇಳದ ಸಿದ್ದತೆಗಳ ನೀಲಿನಕ್ಷೆ ಸಿದ್ಧವಾಗಿದೆ ಹಾಗು ಲಕ್ಷಾಂತರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಕುಂಭ ಮೇಳದ ಆವರಣವನ್ನು ೩೨ ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಉತ್ತರಾಖಾಂಡದ ಅಧಿಕಾರಿಗಳು ತಿಳಿಸಿದ್ದಾರೆ.