ಟೋಕಿಯೋ: ಜಪಾನಿನ ಬುಲೆಟ್ ರೈಲಿನಲ್ಲಿ ಚಲಿಸುತ್ತಿದ್ದಾಗ ಪ್ರಯಾಣಿಕನೊಬ್ಬ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ ಎಂದು ಮಂಗಳವಾರ ಮಾಧ್ಯಮವೊಂದು ವರದಿ ಮಾಡಿದೆ.
ಪ್ರಯಾಣಿಕನೊಬ್ಬ ತನ್ನ ಮೇಲೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡದ್ದಕ್ಕೆ ಟೋಕಿಯೋ ಇಂದ ಅಸಾಕಾ ಕಡೆಗೆ ಪ್ರಯಾಣಿಸುತ್ತಿದ್ದ ಬುಲೆಟ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಜಪಾನ್ ರೈಲಿನ ವಕ್ತಾರ ತಿಳಿಸಿದ್ದಾರೆ.
ಅದುದರಿಂದ ರೈಲನ್ನು ತುರ್ತಾಗಿ ನಿಲ್ಲಿಸಲಾಗಿದ್ದು, ಈ ಘಟನೆಯಿಂದ ಇಬ್ಬರಿಗೆ ಹೃದಯಘಾತವಾಗಿದೆ ಎಂದು ತಿಳಿದುಬಂದಿದೆ. ಈ ಇಬ್ಬರು ಮೃತಪಟ್ಟ ವರದಿಗಳು ಕೂಡ ಲಭ್ಯವಾಗಿವೆ. ಆರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರೈಲಿನಿಂದ ಹೊಗೆ ಬರುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿವೆ.